ಸುಬ್ರಹ್ಮಣ್ಯದಲ್ಲಿ ಲ್ಯಾoಡ್ರಿ ನಡೆಸುತ್ತಿದ್ದ ವ್ಯಕ್ತಿ ಆತ್ಮಹತ್ಯೆ

0

ಸುಬ್ರಹ್ಮಣ್ಯದ ಕಾಶಿಕಟ್ಟೆಯಲ್ಲಿ ಹಲವು ವರ್ಷಗಳಿಂದ ಲ್ಯಾoಡ್ರಿ ನಡೆಸುತಿದ್ದ ವ್ಯಕ್ತಿಯೋರ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಾ.23 ರ ಸಂಜೆ ಸಂಭವಿಸಿದೆ.

ಸುಜಿತ್ ಎಂಬಾತ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.

ಪರ್ವತಮುಖಿ ಬಳಿ ಇರುವ ತಮ್ಮ ರೂಮ್ ನಲ್ಲಿ ನೇಣುಬಿಗಿದುಕೊಂಡಿದ್ದಾರೆ. ಇವರು ಮೂಲತಹ ಧರ್ಮಸ್ಥಳ ಬಳಿಯ ಕೊಕ್ಕಡದವರೆನ್ನಲಾಗಿದೆ.

ಅವರಿಗೆ 38 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಪಲ್ಲವಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.