ಮಾ.26: ದೀಪಾಂಜಲಿ ಮಹಿಳಾ ಭಜನಾ ಮಂಡಳಿಯ ದಶಮಾನೋತ್ಸವ – ರುಕ್ಮಿಣಿ ಸತ್ಯಭಾಮಾ ಸಮೇತ ಗೋಪಾಲಕೃಷ್ಣ ಕಲ್ಯಾಣ ಮಹೋತ್ಸವ

0

ಸುಳ್ಯ ಶಾಂತಿನಗರ ದೀಪಾಂಜಲಿ ಮಹಿಳಾ ಭಜನಾ ಮಂಡಳಿಯ ದಶಮಾನೋತ್ಸವದ ಪ್ರಯುಕ್ತ ಕಾಟುಕುಕ್ಕೆ ಭಜನಾ ಚಾರಿಟೇಬಲ್ ಟ್ರಸ್ಟ್ ಪುತ್ತೂರು ಇದರ ಸಹಯೋಗದಲ್ಲಿ ಮಾ.26 ರಂದು ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದ ಮುಂಭಾಗದಲ್ಲಿ ಶ್ರೀ ರುಕ್ಮಿಣಿ ಸತ್ಯಭಾಮಾ ಸಮೇತ ಶ್ರೀ ಗೋಪಾಲಕೃಷ್ಣ ಕಲ್ಯಾಣ ಮಹೋತ್ಸವ ಅಪರಾಹ್ನ ಗಂಟೆ 3.00 ರಿಂದ ರಾತ್ರಿ 9.30 ರ ಗರೆಗೆ ತಿರುಮಲ ದಾಸ ಸಾಹಿತ್ಯ ಪ್ರಾಜೆಕ್ಟ್ ತಿರುಪತಿ ಟ್ರಸ್ಟ್ ರವರ ನೇತೃತ್ವದಲ್ಲಿ ನಡೆಯಲಿರುವುದು. ಈ ಸಂದರ್ಭದಲ್ಲಿ ಭಜನಾ ಮಂಡಳಿಯ ದಶ ಸಂಭ್ರಮದ ನೆನೆಪಿನ ಹೊತ್ತಗೆ ಭಾಗ -3 ಭಜನಾ ಪುಸ್ತಕ ಬಿಡುಗಡೆ ಹಾಗೂ ದಶ ವಿಶೇಷ ಗೌರವಾನ್ವಿತರಿಗೆ ಸನ್ಮಾನ ಸಮಾರಂಭ ಸಚಿವ ಎಸ್.ಅಂಗಾರ ರವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.
ಮಧ್ವಾಧೀಶ ವಿಠಲದಾಸ ನಾಮಾಂಕಿತ ರಾಮಕೃಷ್ಣ ಕಾಟುಕುಕ್ಕೆ ಯವರಿಗೆ ಗುರು ವಂದನೆ ಸಮರ್ಪಿಸಲಾಗುವುದು.
ಸಚಿವ ಎಸ್.ಅಂಗಾರ ಸೇರಿದಂತೆ ಡಾ.ಕೆ.ವಿ.ಚಿದಾನಂದ, ಡಾ.ಗಿರೀಶ್ ಭಾರಧ್ವಾಜ್, ರೋ| ಸೀತಾರಾಮ ರೈ ಸವಣೂರು,
ರೋ|ಮೀನಾಕ್ಷಿ ಗೌಡ, ಮೋಹನ್ ರಾಮ್ ಸುಳ್ಳಿ, ಆರ್.ಕೆ.ನಾಯರ್,
ಡಾ.ನಿತಿನ್ ಪ್ರಭು, ತಿಮ್ಮಪ್ಪ ಗೌಡ ಮದುವೆಗದ್ದೆ, ಡಾ.ಜೀವನ್ ರಾಂ ಸುಳ್ಯ ರವರನ್ನು ದಶಮಾನೋತ್ಸವದ ಸಂಭ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಗುವುದು ಎಂದು ಭಜನಾ ಮಂಡಳಿಯ ಅಧ್ಯಕ್ಷೆ ಹರ್ಷ ಕರುಣಾಕರ ರವರು ತಿಳಿಸಿದರು.