ಪಾಂಡಿಗದ್ದೆ ಶಾಲೆಯ ನೂತನ ಕೊಠಡಿ ಕಾಮಗಾರಿಗೆ ಗುದ್ದಲಿ ಪೂಜೆ

0

ರ್ನಾಟಕ ಸರಕಾರದಿಂದ ಪಾಂಡಿಗದ್ದೆ ದ.ಕ.ಜಿ.ಪಂ.ಕಿ ಪ್ರಾ. ಶಾಲೆಗೆ ನೂತನ ಎರಡು ಕೊಠಾಡಿ ಮಂಜೂರಾಗಿದ್ದು, ನೂತನ ಕೊಠಡಿಗೆ ಕಾಮಗಾರಿಗೆ ಗುದ್ದಲಿ ಪೂಜೆಯುಮಾ.23 ರಂದು ನೆರವೇರಿಸಲಾಯಿತು.


ಪಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಪೂರ್ಣಿಮಾ ದೇರಾಜೆ ಯವರು ಗುದ್ದಲಿ ಪೂಜೆ ನೆರವೇರಿಸಿದರು.


ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಂಜ ಗ್ರಾಮ ಪಂಚಾಯತ್ ಪೂರ್ವಾಧ್ಯಕ್ಷ ಡಾ. ರಾಮಯ್ಯ ಭಟ್ ಪಂಜ, ಪಂಚಾಯತ್ ಸದಸ್ಯರಾದ ಲಕ್ಷ್ಮಣ ಗೌಡ ಬೊಳ್ಳಾಜೆ, ದಾನಿಗಳಾದ ಜಯರಾಮ ಕಂಬಳ, ಶಿಕ್ಷಣ ಸಂಯೋಜಕಿ ಶ್ರೀಮತಿ ಸಂಧ್ಯಾ ಕುಮಾರಿ , ಎಸ್ ಡಿ ಎಂ ಸಿ ಅಧ್ಯಕ್ಷ ವಾಚಣ್ಣ ಕೆರೆಮೂಲೆ ಭಾಗವಹಿಸಿದ್ದರು. ಎಸ್ ಡಿ ಎಂ ಸಿ ಸದಸ್ಯರು, ಶಿಕ್ಷಕರು,ಪೋಷಕರು ಮತ್ತು ಶಾಲಾ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯ ಯಶೋಧರ ಕೆ ಸ್ವಾಗತಿಸಿದರು. ಸಹಶಿಕ್ಷಕ ಅಶೋಕ್ ಕುಮಾರ್ ನಿರೂಪಿಸಿದರು ಮತ್ತು ವಂದಿಸಿದರು.