ಹರಿಹರ‌ ಪಲ್ಲತಡ್ಕ ಗ್ರಾ.ಪಂ ಗೆ ಜಲ ಸಂಜೀವಿನಿ ಪಂಚಾಯತ್ ಪುರಸ್ಕಾರ ಪ್ರದಾನ

0

ಹರಿಹರ‌ ಪಲ್ಲತಡ್ಕ ಗ್ರಾ.ಪಂ ಜಲ ಸಂಜೀವಿನಿ ಪಂಚಾಯತ್ ಪುರಸ್ಕಾರಕ್ಕೆ ಆಯ್ಕೆಯಾಗಿದ್ದು ಇಂದು ಬೆಂಗಳೂರಿನಲ್ಲಿ ಪ್ರಶಸ್ತಿ ಸ್ವೀಕರಿಸಿದ್ದಾರೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿಯಲ್ಲಿ ಉತ್ತಮ ಕಾರ್ಯ ಕೈಗೆತ್ತಿಕೊಂಡಿರುವುದಕ್ಕಾಗಿ ಈ ಪ್ರಶಸ್ತಿ ಯ ಸ್ವೀಕರಿಸಿದ್ದಾರೆ. ಹಿಂದುಳಿದ ಮತ್ತು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಪ್ರಶಸ್ತಿ ವಿತರಿಸಿದ್ದಾರೆ.


ತಾ.ಪಂ ಕಾರ್ಯನಿರ್ವಹಣಾಧಿಕಾರಿ ಭವಾನಿಶಂಕರ, ಗ್ರಾ.ಪಂ ಅಧ್ಯಕ್ಷ ಜಯಂತ ಬಾಳುಗೋಡು, ಉಪಾಧ್ಯಕ್ಷ ವಿಜಯ ಅಂಙಣ, ಪಿಡಿಒ ಪುರುಷೋತ್ತಮ ಮಣಿಯಾನ ಮನೆ, ಗ್ರಾ.ಪಂ ಸದಸ್ಯ ದಿವಾಕರ ಮುಂಡಾಜೆ, ಪಂಚಾಯತ್ ಸಿಬ್ಬಂದಿ ಪ್ರಿಯ‌ ಕಲ್ಲೇಮಠ ಬೆಂಗಳೂರಿಗೆ ತೆರಳಿ ಪ್ರಶಸ್ತಿ ಸ್ವೀಕರಿಸಿದ್ದಾರೆ.