ಸ.ಹಿ.ಪ್ರಾ.ಶಾಲೆ ಬಂಗ್ಲೆಗುಡ್ಡೆ ಕೊಲ್ಲಮೊಗ್ರು ಶಾಲೆಗೆ 25000 ರೂಪಾಯಿಗಳ ಪುಸ್ತಕ ಕೊಡುಗೆ

0

ಸ.ಹಿ.ಪ್ರಾಥಮಿಕ ಶಾಲೆ ಬಂಗ್ಲೆಗುಡ್ಡೆ, ಕೊಲ್ಲಮೊಗ್ರು ಶಾಲೆಗೆ ವೇರ್ ಹೌಸ್ ಇನ್ ಚಾರ್ಜ್ ಆಫ್ ಬ್ಲೂಮ್ ಎನರ್ಜಿ ಬೆಂಗಳೂರು ಇದರ ಮಾಲಕರಾದ ಮಹದೇವ ಸ್ವಾಮಿಯವರು ತಮ್ಮ 25ನೇ ವಿವಾಹ ವಾರ್ಷಿಕೋತ್ಸವದ ಸವಿ ನೆನಪಿಗಾಗಿ ಮಕ್ಕಳ ಜ್ಞಾನ ವರ್ಧನೆಗೆ ಅನುಕೂಲಿಸುವ 25,000 ರೂಪಾಯಿಗಳ ಸುಮಾರು 250 ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದ್ದಾರೆ.

*ಇವರು ಫೆಬ್ರವರಿ 2022 ರಲ್ಲಿ ಇದೇ ಶಾಲಾ ವಿದ್ಯಾರ್ಥಿಗಳಿಗೆ 15,000 ರೂ ಮೌಲ್ಯದ ಧ್ವನಿ ವರ್ಧಕವನ್ನು ನೀಡಿದ್ದರು.

ಲಕ್ಷ್ಮೀಶ ಶಿರೂರು ಇವರು ಈ ಶಾಲೆಗೆ ಕಳೆದೆರಡು ವರ್ಷಗಳಿಂದ ವಿವಿಧ ರೀತಿಯಲ್ಲಿ, ದಾನಿಗಳಿಂದ ಧ್ವನಿವರ್ಧಕ, 4 ಕಂಪ್ಯೂಟರ್, 1 ಲಾಪ್ ಟಾಪ್ ಇತ್ಯಾದಿ ವಸ್ತುಗಳನ್ನು ಕೊಡುಗೆಯಾಗಿ ನೀಡಿದ್ದಾರೆ.