ಯೇನೆಕಲ್ಲು ಜಾತ್ರೋತ್ಸವ : ಇಂದು ಗೊನೆ ಮುಹೂರ್ತ

0



ಶ್ರೀ ಶಂಖಪಾಲ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ, ಶ್ರೀ ಉಳ್ಳಾಕುಲು, ಉಳ್ಳಾಳ್ತಿ, ಬಚ್ಚನಾಯಕ, ದೈವಸ್ಥಾನ ಯೇನೆಕಲ್ಲು ಇದರ ವಾರ್ಷಿಕ ಜಾತ್ರೋತ್ಸವವು ಮಾ. 24ರಿಂದ ಏ. 2ರ ತನಕ ವಿಜೃಂಭಣೆಯಿಂದ ಜರಗಲಿದ್ದು, ಮಾ. 24ರಂದು ಗೊನೆ ಮುಹೂರ್ತ ನೆರವೇರಿತು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಾಗೇಶ್ ನೆಕ್ರಾಜೆ, ಮಾಗಣೆ ಗೌಡರಾದ ಉದಯಕುಮಾರ್ ಬಾನಡ್ಕ ಸೇರಿದಂತೆ ವ್ಯವಸ್ಥಾಪನಾ ಸಮಿತಿ ಸದಸ್ಯರು, ಪೂಜಾರಿ ವರ್ಗದವರು, ಅರ್ಚಕ ವೃಂದ ಮತ್ತು ಭಕ್ತಾದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಮಾ. 27ರಂದು ಬೆಳಿಗ್ಗೆ 10.00 ಗಂಟೆಯಿಂದ ಭಜನೆ, ರಾತ್ರಿ 7.00 ಗಂಟೆಯಿಂದ ರಂಗಪೂಜೆ, ಶ್ರೀ ಭೂತಬಲಿ ಉತ್ಸವ, ವಸಂತಕಟ್ಟೆ ಪೂಜೆ, ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ಜರಗಲಿದೆ. ಮಾ. 28ರಂದು ಪೂ. 9.00ರಿಂದ ಮಹಾಗಣಪತಿ ಹೋಮ, ಶ್ರೀ ದೇವರ ಬಲಿ ಉತ್ಸವ, ದರ್ಶನ ಬಲಿ, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ಜರಗಲಿದೆ.


ಶ್ರೀ ಉಳ್ಳಾಕುಲು, ಉಳ್ಳಾಳ್ತಿ, ಬಚ್ಚನಾಯಕ ದೈವಸ್ಥಾನದಲ್ಲಿ ಮಾ. 29ರಂದು ಸಂಜೆ 6.30ರಿಂದ ಉಗ್ರಾಣ ತುಂಬಿಸುವುದು, ಮುಹೂರ್ತ ತೋರಣ, ಉಳ್ಳಾಕುಲು ವಗೈರೆ ದೈವಗಳು ನೇಮೋತ್ಸವ ನಡೆಯಲಿದೆ. ಮಾ. 30ರಂದು ರಾತ್ರಿ 8.00ರಿಂದ ಉಳ್ಳಾಳ್ತಿ ವಗೈರೆ ದೈವಗಳ ನೇಮೋತ್ಸವ ಜರಗಲಿದೆ. ಮಾ. 31ರಂದು ರಾತ್ರಿ 7.00 ಗಂಟೆಯಿಂದ ಭಂಡಾರ ಬಂದು ಉಡ್ಡೋತ್ತಾರು ಕುಮಾರ ದೈವಗಳ ನೇಮೋತ್ಸವ ನಡೆಯಲಿದೆ. ಏ. 01ರಂದು ಬೆಳಿಗ್ಗೆ 6.00ರಿಂದ ಶ್ರೀ ಬಚ್ಚನಾಯಕ ದೈವದ ನಂತರ ಕೋಟಿನಾಯಕ ದೈವದ ನೇಮೋತ್ಸವ ನಡೆಯಲಿದೆ. ರಾತ್ರಿ 8.00 ಗಂಟೆಯಿಂದ ಪ್ರಧಾನಿ ವಗೈರೆ ನೇಮ ನಡೆಯಲಿದೆ.

ಬಳಿಕ ಭಂಡಾರ ಹೊರಡಲಿದೆ. ಏ. 2ರಂದು ರಾತ್ರಿ 8.00ರಿಂದ ಗುಳಿಗ ದೈವದ ನೇಮೋತ್ಸವ ನಡೆಯಲಿದೆ. ಏ. 20ರಂದು ಮಧ್ಯಾಹ್ನ ಶ್ರೀ ದೇವರ ಪ್ರತಿಷ್ಠಾ ದಿವಸದ ಅಂಗವಾಗಿ ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ, ರಾತ್ರಿ 7.30ರಿಂದ ರಂಗಪೂಜೆ, ಪ್ರಸಾದ ವಿತರಣೆ ನಡೆಯಲಿದೆ.