ಬಾಳುಗೋಡು: ಕುಡುಮುಂಡೂರು ಕೋಟೆ ಐನೆಕಿದು ರಸ್ತೆ ಅಭಿವೃದ್ಧಿ ಬೇಡಿಕೆ ಇರಿಸಿ ಮತದಾನ ಬಹಿಷ್ಕಾರ ಬ್ಯಾನರ್ ಅಳವಡಿಕೆ

0

ಬಾಳುಗೋಡು ಗ್ರಾಮದ ಕುಡುಮುಂಡೂರು ಕೋಟೆ ಐನೆಕಿದು ಸಂಪರ್ಕ ರಸ್ತೆಯ ದುರಾವಸ್ಥೆ ಖಂಡಿಸಿ ಮತದಾನ ಬಹಿಷ್ಕಾರ ಬ್ಯಾನರ್ ನ್ನು ಶಿವಾಲ ಬಳಿ ಅಳವಡಿಸಲಾಗಿದೆ.


ಇಷ್ಟು ಸಲ ಚುಣಾವಣೆಯಾದರು ಗುದ್ದಲಿ ಪೂಜೆ ಮಾಡಿ ರಸ್ತೆ ಮಾಡಿಕೊಡುವ ಭರವಸೆ ಕೊಟ್ಟದೇ ಹೊರತು ಕಾಮಗಾರಿ ಇನ್ನೂ ನಡೆದಿಲ್ಲ. ರಾಜಕಾರಣಿಗಳೂ ಮತ್ತು ಅವರಿಗೆ ಸಹಾಯಮಾಡುವ ಊರ ಗಣ್ಯರು ನಮ್ಮ ಊರಿನ ಕಥೆಗಳ ಜೊತೆ ಕಣ್ಣಾಮುಚ್ಚಾಲೆ ಆಡುತ್ತಿದ್ದಾರೆ. ಈ ಸಲ ರಸ್ತೆ ಕಾಮಗಾರಿ ನಡೆಯದಿದ್ದರೆ ಮುಂದೆ ಬರುವ ಯಾವುದೇ ಚುನಾವಣೆಗೆ ಯಾವ ಪಕ್ಷದವರು ಮತ ಕೇಳಲು ಬರಬಾರದು ಒಂದು ವೇಳೆ ಬಂದಲ್ಲಿ ಅವರು ಅನಾಗರಿಕರು ಮತ್ತು ನಪುಂಸಕರು ಆಗಿರುತ್ತಾರೆ ಎಂದು ಬ್ಯಾನರ್ ನಲ್ಲಿ ಉಲ್ಲೇಖಿಸಲಾಗಿದೆ.