ವಾಷ್ಠರ್ ಫೈವ್ ಸ್ಟಾರ್ ಸಂಗೀತ ಬಳಗದ ವತಿಯಿಂದ ಗಾಯಕ ದಿ| ವಿಶ್ವದೀಪ್ ಕುಂದಲ್ಪಾಡಿ ಪ್ರಥಮ ಪುಣ್ಯಸ್ಮರಣೆಗೆ ಶೋಕಗಾನ ಕಾರ್ಯಕ್ರಮ

0

ಕಳೆದ ವರ್ಷ ಅಪಘಾತದಿಂದ ಸಾವನ್ನಪ್ಪಿದ್ದ ಪೆರಾಜೆಯ ಬಾಲಗಾಯಕ ಮತ್ತು ಪ್ರತಿಭಾನ್ವಿತ ದಿ| ವಿಶ್ವದೀಪ್ ಕುಂದಲ್ಪಾಡಿ ಅವರ ಪ್ರಥಮ ವರ್ಷದ ಪುಣ್ಯಸ್ಮರಣೆಯ ಪ್ರಯುಕ್ತ ವಾಷ್ಠರ್ ಫೈವ್ ಸ್ಟಾರ್ ಸಂಗೀತ ಬಳಗದ ವಾಟ್ಸಾಪ್ ಆನ್ ಲೈನ್ ಲ್ಲಿ ಶೋಕಗಾನ ಕಾರ್ಯಕ್ರಮವನ್ನು ಆಯೋಜಿಸಿದ್ದರು .

ವಾಷ್ಠರ್ ಫೈವ್ ಸ್ಟಾರ್ ಸಂಗೀತ ಬಳಗದ ಅಡ್ಮಿನ್ ಹಾಗೂ ಅಧ್ಯಕ್ಷ ಎಚ್ .ಭೀಮರಾವ್ ವಾಷ್ಠರ್ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ನಿರೂಪಿಸಿದರು . ವಿಶ್ವದೀಪ್ ರವರ ತಂದೆಯಾದ ಲೋಕನಾಥ ಗೌಡ ಕುಂದಲ್ಪಾಡಿ ಮತ್ತು ತಾಯಿ ರೇಣುಕಾ ಕುಂದಲ್ಪಾಡಿ ಅವರು ಉಪಸ್ಥಿತರಿದ್ದರು .

ಶೋಕಗಾನ ಕಾರ್ಯಕ್ರಮದಲ್ಲಿ ವೀಕ್ಷಾ ವಾಲ್ತಾಜೆ ಸುಳ್ಯ , ಚೇತನ್ ಅಮೀನ್ , ಸಂಗೀತಾ ಶೆಟ್ಟಿ ಕಾಸರಗೋಡು , ಶಾಲ್ಮಲಿ ಡಿ ಕೆ ಸುಳ್ಯ , ಅಶ್ವಿಜ್ ಆತ್ರೇಯ ಸುಳ್ಯ , ಬೇಬಿ ಯಶ್ವಿಕಾ ಕುಂಟಿನಿ ಸುಳ್ಯ , ಪೂಜಾಶ್ರೀ ಬಳ್ಳಡ್ಕ ಸುಳ್ಯ , ಜಯಂತ್ ಮೆತ್ತಡ್ಕ , ಶ್ರೀಮತಿ ಪುಷ್ಪಾ ಎಡಮಂಗಲ ಸುಳ್ಯ ,ತನ್ಮಯ್ ಸೋಮಯಾಗಿ ಸುಳ್ಯ , ಸುಭಾಷಿಣಿ ಚಂದ್ರ ಕಾಸರಗೋಡು , ಸನತ್ ಬೆಳ್ಳಾರೆ , ಮುರಳಿಕೃಷ್ಣ ಯಾದವ್ ನೀರ್ಚಾಲ್ , ಮಮತಾ ಮಡಿಕೇರಿ, ಕೃಷ್ಣ ಪೊಲೀಸ್ ಮಂಗಳೂರು ರವರು ಭಾವಪೂರ್ಣ ಶೋಕ ಗೀತೆಗಳನ್ನು ಹಾಡಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು. ಯಾವ ಮೋಹನ ಮುರುಳಿ ಕರೆಯಿತೋ , ಆಡಿಸಿದಾತ ಬೇಸರ ಮೂಡಿಸಿ ಆಟ ಮುಗಿಸಿದ , ಹುಟ್ಟು ಸಾವಿನ ನಡುವೆ , ನಿನ್ನ ಕಂಗಳ , ಎಲ್ಲೇ ಇರು ಹೇಗೆ ಇರು, ನೀ ಹಿಂಗ ನೋಡಬ್ಯಾಡ , ಭೂಮಿ ಮ್ಯಾಲೆ ಬಾಡಿಗೆದಾರ , ಅಣ್ಣಯ್ಯ ನನ್ನ ಮರಿಬ್ಯಾಡ , ಈ ಮೌನರಾಗ , ಮರಣವಿಟ್ಟ ಓ ದೇವರೇ, ಕಣ್ಣಿಗೆ ಕಾಣದ ನಾಟಕಕಾರ ಇನ್ನಿತರ ಗೀತೆಗಳನ್ನು ಹಾಡಿದರು . ವಿಶ್ವದೀಪ್ ಮತ್ತೊಮ್ಮೆ ಹುಟ್ಟಿ ಬರಲಿ ಎಂದು ಭಗವಂತನಲ್ಲಿ ಪ್ರಾರ್ಥಿಸಿದರು. ವಿಶ್ವದೀಪ್ ಹೆತ್ತವರು ಎಲ್ಲರಿಗೂ ವಂದಸಿದರು