ಇಂಟಕ್ ಕಾಂಗ್ರೆಸ್ ಅಧ್ಯಕ್ಷ ಶಾಫಿ ಕುತ್ತಮೊಟ್ಟೆ ಆಗ್ರಹ

ಸುಳ್ಯದ ಗುರುಂಪಿನಲ್ಲಿ ಗುಡ್ಡ ಜರಿತದಿಂದ ಮೃತಪಟ್ಟ ಕಾರ್ಮಿಕರ ಕುಟುಂಬಕ್ಕೆ ಸರಕಾರ ಶೀಘ್ರವೇ ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಸುಳ್ಯ ವಿಧಾನಸಭಾ ಕ್ಷೇತ್ರದ ಇಂಟಕ್ ಕಾಂಗ್ರೆಸ್ ಅಧ್ಯಕ್ಷ ಶಾಫಿ ಕುತ್ತಮೊಟ್ಟೆ ಆಗ್ರಹಿಸಿದ್ದಾರೆ.
ಸುಳ್ಯದಲ್ಲಿ ನಡೆದ ಘಟನೆ ಮತ್ತೆ ಮರು ಕಳಿಸಬಾರದು. ಇಂತಹ ಗುಡ್ಡೆ ಅಗೆದ ಜಾಗದ ಕುರಿತು ನ.ಪಂ. ಪರಿಶೀಲನೆ ನಡೆಸಿ ಗಮನ ಹರಿಸಬೇಕು. ಹಾಗೂ ಇಂದು ಮೃತ ಪಟ್ಟ ಕುಟುಂಬದವರ ಮಕ್ಕಳ ಶಿಕ್ಷಣಕ್ಕೂ ಸರಕಾರ ಒತ್ತುನೀಡಬೇಕು ಎಂದವರು ಆಗ್ರಹಿಸಿದ್ದಾರೆ.