ಅರಂಬೂರು – ಮಜಿಗುಂಡಿ- ಪಾಲಡ್ಕ ಕಾಂಕ್ರೀಟಿಕರಣ ರಸ್ತೆಯ ಉದ್ಘಾಟನೆ

0

ಆಲೆಟ್ಟಿ ಗ್ರಾಮದ ಅರಂಬೂರು ಮಜಿಗುಂಡಿ ಪಾಲಡ್ಕ ಕಾಂಕ್ರೀಟಿಕರಣ ರಸ್ತೆಯ ಉದ್ಘಾಟನೆಯನ್ನು ಆಲೆಟ್ಟಿ ಪಂಚಾಯತ್ ಅಧ್ಯಕ್ಷೆ ಪುಷ್ಪಾವತಿ ಕುಡೆಕಲ್ಲು ರವರು ನೆರವೇರಿಸಿದರು.


ಈ ಭಾಗದ ಜನರ ಬಹು ಬೇಡಿಕೆಯ ರಸ್ತೆಯಾಗಿದ್ದು
ಮುಖ್ಯ ಮಂತ್ರಿಯವರ ವಿಶೇಷಅನುದಾನದಡಿಯಲ್ಲಿ ಸಚಿವರಾದ ಎಸ್.ಅಂಗಾರ ರವರ ಶಿಫಾರಸ್ಸಿನ ಮೇರೆಗೆ
ರೂ.25 ಲಕ್ಷ ಅನುದಾನದಲ್ಲಿ ಕಾಂಕ್ರೀಟ್ ಕಾಮಗಾರಿಯನ್ನು ನಡೆಸಲಾಗಿತ್ತು.


ಈ ಸಂದರ್ಭದಲ್ಲಿ ಪಂಚಾಯತ್ ಸದಸ್ಯರಾದ ರತೀಶನ್ ಅರಂಬೂರು, ಸುದೇಶ್ ಅರಂಬೂರು, ವೇದಾವತಿ ನೆಡ್ಚಿಲು, ಆಲೆಟ್ಟಿ ಸೊಸೈಟಿ ಮಾಜಿ ಅಧ್ಯಕ್ಷ ಶ್ರೀಪತಿ ಭಟ್ ಮಜಿಗುಂಡಿ, ಸ್ಥಳೀಯರಾದ ಚಂದ್ರಶೇಖರ ನೆಡ್ಚಿಲು, ಪುಷ್ಪರಾಜ ಅರಂಬೂರು, ಉಮೇಶ್ ಮಜಿಗುಂಡಿ, ಉದಯನಾರಾಯಣ ಭಟ್ ಮಜಿಗುಂಡಿ, ಐತ್ತಪ್ಪ ಮೂಲ್ಯ, ಶಿವಶಂಕರ ಪಾಲಡ್ಕ, ಸೂರ್ಯನಾರಾಯಣ ಭಟ್, ರತ್ನಾಕರ ರೈ ಅರಂಬೂರು, ಎನ್.ಎ.ಗಂಗಾಧರ ನೆಡ್ಚಿಲು, ಬಾಲಕೃಷ್ಣ ಆಳ್ವ ಅರಂಬೂರು, ರಾಮ ಭಟ್, ಹರಿದಾಸ ನಂಬಿಯಾರ್ ಮತ್ತಿತರರು ಉಪಸ್ಥಿತರಿದ್ದರು. ಶ್ರೀಪತಿ ಭಟ್ ಮಜಿಗುಂಡಿ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here