ಬೆಳ್ಳಾರೆ: ಜ್ಞಾನಗಂಗಾ ಸೆಂಟ್ರಲ್ ಸ್ಕೂಲ್ ನಲ್ಲಿ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ವಿದಾಯ ಸಮಾರಂಭ

0

ಬೆಳ್ಳಾರೆ ಜ್ಞಾನಗಂಗಾ ಸೆಂಟ್ರಲ್ ಸ್ಕೂಲ್ ನಲ್ಲಿ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ವಿದಾಯ ಸಮಾರಂಭ ಮಾ. 24ರಂದು ನಡೆಯಿತು.
ಶಾಲಾ ವಿದ್ಯಾರ್ಥಿನಿಯರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕೆ.ಎಂ .ಕಾರ್ಯಪ್ಪ ಕಾಲೇಜು‌ ಮಡಿಕೇರಿ ಇಲ್ಲಿಯ ಅಸೋಸಿಯೇಟ್ ಪ್ರೊಫೆಸರ್ ಡಾ. ನಯನಾ ಕಶ್ಯಪ್ ಮಾತನಾಡಿ ‘ವಿದ್ಯಾರ್ಥಿಗಳಿಗೆ ಈಗ ಹಲವಾರು ಅವಕಾಶಗಳಿದ್ದು, ಹಲವು ದಾರಿಗಳಲ್ಲಿ ಮುಂದುವರೆಯುತ್ತಾರೆ. ಹೀಗಿರುವಾಗ ಹೆತ್ತವರು ವಿದ್ಯಾರ್ಥಿಗಳ ಪ್ರತಿಭೆ ಮತ್ತು ಸಾಮರ್ಥ್ಯ ವನ್ನರಿತು ಸ್ವಾತಂತ್ರ್ಯ ನೀಡಿ ಅವರು ತಮ್ಮ ಗುರಿಯನ್ನು ಸಾಧಿಸುವಂತೆ ಮಾರ್ಗದರ್ಶಿಸಬೇಕು.’ ಎಂದರು.

ವೇದಿಕೆಯಲ್ಲಿ ಉಪಸ್ಥಿತರಿದ್ದ
ಶಾಲಾ ಸಂಚಾಲಕರಾದ ಎಂ.ಪಿ.ಉಮೇಶ್ ಮಾತನಾಡಿ ‘ವಿದ್ಯಾರ್ಥಿಗಳು ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಮತ್ತು ಜೀವನದಲ್ಲಿ ಶಿಸ್ತನ್ನು ಅಳವಡಿಸಿಕೊಳ್ಳಬೇಕು ಎಂದರು. ವಿದ್ಯಾರ್ಥಿ ಪೋಷಕರ ಪರವಾಗಿ ಶ್ರದ್ಧಾ ಎಲ್. ರೈ ಶುಭ ಹಾರೈಸಿದರು. ಹತ್ತನೇ ತರಗತಿ ವಿದ್ಯಾರ್ಥಿ ಶ್ರೇಯಾನ್ ತನ್ನ ಶಾಲಾ ಅನುಭವಗಳನ್ನು ಹಂಚಿಕೊಂಡರು. ವೇದಿಕೆಯಲ್ಲಿ ಉಪಸ್ಥಿತರಿದ್ದು, ಶಾಲಾ ಪ್ರಾಂಶುಪಾಲೆ ದೇಚಮ್ಮ ಟಿ.ಎಮ್ ಸ್ವಾಗತಿಸಿದರು. ವಿದ್ಯಾರ್ಥಿ ದೇವಲ್ ವಂದಿಸಿದರು.
ಶಾಲಾ ವಿದ್ಯಾರ್ಥಿಗಳಾದ ಸ್ತುತಿ ಆರ್.ಭಟ್, ಸಯ್ಯದ್ ಅಫಮ್ ಮತ್ತು ಧನುಷ್ ರಾಮ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here