‘ಗುರುದೇವ್ ಹೊಯ್ಸಳ’ ಚಿತ್ರದಲ್ಲಿ ಸುಳ್ಯದ ಅನಿರುದ್ಧ ಭಟ್

0


‘ಗುರುದೇವ್ ಹೊಯ್ಸಳ’ ಚಿತ್ರದಲ್ಲಿ ಸುಳ್ಯದ ಅನಿರುದ್ಧ ಭಟ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಹೊಂಬಾಳೆ ಸಿನಿಮಾ ಅರ್ಪಿಸುವ ಕೆ. ಆರ್. ಜಿ. ಸ್ಟುಡಿಯೋ ನಿರ್ಮಾಣದ ಡಾಲಿ ಧನಂಜಯ ನಾಯಕ ನಟರಾಗಿ ಅಭಿನಯಿಸಿರುವ 25ನೇ ಚಿತ್ರ ‘ಗುರುದೇವ್ ಹೊಯ್ಸಳ’ ಮಾರ್ಚ್ 30ರಂದು ದೇಶದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

10ಕ್ಕೂ ಹೆಚ್ಚು ಕಿರು ಚಿತ್ರಗಳನ್ನು ರಚಿಸಿ, ನಟಿಸಿ, ನಿರ್ದೇಶಿಸಿರುವ ಅನಿರುದ್ಧ ಭಟ್ ‘ಗುರುದೇವ್ ಹೊಯ್ಸಳ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ.
ಇವರು ದೊಡ್ಡತೋಟದ ಕಿಲಾರ್ಕಜೆ ದಿ ರಾಧಾಕೃಷ್ಣ ಭಟ್ – ದೇವಕಿ ದಂಪತಿಗಳ ಮೊಮ್ಮಗ ಹಾಗೂ ಅನಿತಾ – ವೇದಮೂರ್ತಿ ದಂಪತಿಗಳ ಪುತ್ರ.