ಸುಳ್ಯ : ಗುಡ್ಡ ಕುಸಿದು ಮೂವರು ಮೃತಪಟ್ಟ ಸ್ಥಳಕ್ಕೆ ಸಚಿವ ಎಸ್.ಅಂಗಾರ ಭೇಟಿ

0

ಸರಕಾರದಿಂದ ಪರಿಹಾರ ನೀಡುವ ಭರವಸೆ

ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದ
ವೇಳೆ ಮನೆ ಹಿಂದೆ ಇದ್ದ ಗುಡ್ಡ ಕುಸಿದು ಮಣ್ಣಿನಡಿಗೆ ಸಿಲುಕಿ ಗದಗ ಜಿಲ್ಲೆಯ ಮೂವರು ಕಾರ್ಮಿಕರು ಮೃತಪಟ್ಟಿರುವ ದುರ್ಘಟನೆ ಸುಳ್ಯದ ಗುರುಂಪುವಿನಲ್ಲಿ ಮಾ.25 ರಂದು ನಡೆದಿದೆ.ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ
ದಳ ಮತ್ತು ಪೊಲೀಸರು ನಿರಂತರ ಕಾರ್ಯಾಚರಣೆ
ನಡೆಸಿ ಮೂವರ ಮೃತದೇಹಗಳನ್ನು ಹೊರತೆಗದಿದ್ದಾರೆ.
ಸುದ್ದಿ ತಿಳಿದ ತಕ್ಷಣ ಘಟನಾ
ಸ್ಥಳಕ್ಕೆ ಸಚಿವ ಎಸ್. ಅಂಗಾರರವರು
ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಸುದ್ದಿಗಾರರೊಂದಿಗೆ
ಮಾತನಾಡಿ
ಈ ದುರ್ಘಟನೆಯಲ್ಲಿ ಮೂರು ಜನ ಕಾರ್ಮಿಕರು
ಮೃತಪಟ್ಟಿದ್ದಾರೆ. ಮೃತ ಕೂಲಿ ಕಾರ್ಮಿಕರ ಬಗ್ಗೆ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ
ಗಮನಕ್ಕೆ ತಂದು ಸರ್ಕಾರದಿಂದ ಪರಿಹಾರ ನೀಡುವ
ಹಾಗೆ ಪ್ರಯತ್ನಿಸುತ್ತೇನೆ ಎಂದರು.
ಅನುಮತಿ ಪಡೆಯದೆ ಕಾನೂನು ಬಾಹಿರವಾಗಿ
ಗುಡ್ಡವನ್ನು ಸಮತಟ್ಟು ಮಾಡುವವರ ವಿರುದ್ಧ ಕ್ರಮ ವಹಿಸುವಂತೆ ಹೇಳುತ್ತೇನೆ.


ದ. ಕ.ಜಿಲ್ಲೆಯ ಸುಳ್ಯ, ಬೆಳ್ತಂಗಡಿ, ಪುತ್ತೂರು
ಭಾಗ ಗುಡ್ಡಗಾಡು ಪ್ರದೇಶವಾದ ಕಾರಣ ಒಂದು
ಮನೆಯನ್ನು ನಿರ್ಮಾಣ ಮಾಡಬೇಕಾದರೆ ಜಾಗ
ಸಮತಟ್ಟು ಮಾಡಬೇಕು. ಆಗ ಗುಡ್ಡವನ್ನು ಸಮತಟ್ಟು
ಮಾಡುತ್ತಾರೆ. ಸರ್ಕಾರದಿಂದ ಅನುಮತಿಯನ್ನು
ಪಡೆಯದೇ ಕಾನೂನು ಬಾಹಿರವಾಗಿ ಗುಡ್ಡವನ್ನು
ಕಡಿಯುವವರ ವಿರುದ್ಧ ತಕ್ಷಣ ಕ್ರಮವನ್ನು
ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.

LEAVE A REPLY

Please enter your comment!
Please enter your name here