ವಳಲಂಬೆಯಲ್ಲಿ ಸಾಮೂಹಿಕ ಸತ್ಯನಾರಾಯಣ ದೇವರ ಪೂಜೆ, ರಾಜ್ಯ ದೈವ ಹಾಗೂ ಪುರುಷ ದೈವದ ನೇಮ

0

ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನ ಇಲ್ಲಿ
ಮಾ.24 ರ ಬೆಳಗ್ಗೆ ಗಣಪತಿ ಹೋಮ, ಶತ ರುದ್ರಾಭಿಷೇಕ ಹಾಗೂ 38 ನೇ ವರ್ಷದ ಲಕ್ಷ್ಮೀ ಸಹಿತ ಸತ್ಯನಾರಾಯಣ ದೇವರ ಪೂಜೆ ನಡೆಯಿತು ಹಾಗೂ ಕಂದ್ರಪ್ಪಾಡಿ ಮತ್ತು ತಳೂರಿನಿಂದ ಪುರುಷದೈವ ಮತ್ತು ರಾಜ್ಯ ದೈವದ ಭಂಡಾರ ತರಲಾಯಿತು.

ಸಂಜೆ ಭಜನಾ ಕಾರ್ಯಕ್ರಮ ನಡೆದಿದ್ದು ರಾತ್ರಿ ದುರ್ಗಾ ಪೂಜೆ ಮತ್ತು ಕಾರ್ತಿಕ ಪೂಜೆ ನಡೆಯಿತು. ರಾತ್ರಿ ಪಂಜುರ್ಲಿ ಕೃಪಾಪೋಷಿತ ಯಕ್ಷಗಾನ ಮಂಡಲಿ ಗೋಳಿಗರಡಿ ವತಿಯಿಂದ ಗೋಳಿಗರಡಿ ಕ್ಷೇತ್ರ ಮಹಾತ್ಮೆ ನಡೆಯಿತು.


ಮಾ. 25 ರ ಬೆಳಗ್ಗೆ ರಾಜ್ಯ ದೈವದ ನೇಮ ಹಾಗೂ ಪುರುಷ ದೈವದ ನೇಮ ನಡೆದು ಪ್ರಸಾದ ವಿತರಣೆ ನಡೆದು ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು. ಆಡಳಿತ ಮಂಡಳಿಯವರು, ವಿವಿಧ ಸಮಿತಿಗಳ ಪದಾಧಿಕಾರಿಗಳು ಊರವರು ಕಾರ್ಯಕ್ರಮ ಯಶಸ್ವಿಗೊಳಿಸಿದರು.

LEAVE A REPLY

Please enter your comment!
Please enter your name here