ಸುಳ್ಯ ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ

0


ಸುಳ್ಯ ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ ಇಂದು ಸುಳ್ಯದ ಮಹಿಳಾ ಮಂಡಲಗಳ ಒಕ್ಕೂಟದ ಸಭಾಭವನದಲ್ಲಿ ನೆರವೇರಿತು.


ಸಭಾಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ತ್ರಿವೇಣಿ ಪಿ. ದಾಮ್ಲೆ ವಹಿಸಿದ್ದರು. ಒಕ್ಕೂಟದ ಸ್ಥಾಪಕಾಧ್ಯಕ್ಷರಾದ ಶ್ರೀಮತಿ ನೇತ್ರಾವತಿ ಪಡ್ಡಂಬೈಲು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ರಾಜೀವ್ ಗಾಂಧಿ ಆರೋಗ್ಯ ವಿಶ್ವ ವಿದ್ಯಾನಿಲಯದ ಸೆನೆಟ್ ಸದಸ್ಯೆ ಹಾಗೂ ಇಂಡಿಯನ್ ರೇಡಿಯೋಲಜಿ ಅಸೋಸಿಯೇಶನ್ ಕರ್ನಾಟಕ ಶಾಖೆಯ ಉಪಾಧ್ಯಕ್ಷರಾದ ಡಾ. ಐಶ್ವರ್ಯ ಕೆ.ಸಿ. ಸ್ತನ ಕ್ಯಾನ್ಸರ್ ಬಗ್ಗೆ ಮಾಹಿತಿ ನೀಡಿದರೆ, ಕೆಎಫ್‌ಡಿಸಿ ಉದ್ಯಾನವನ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಸಾಯಿಗೀತ ಜ್ಞಾನೇಶ್, ಗರ್ಭಕೋಶದ ಕಾಯಿಲೆಯ ಬಗ್ಗೆ ಮಾಹಿತಿ ನೀಡಿದರು. ಸುಳ್ಯ ನ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷೆ ಕಿಶೋರಿ ಶೇಟ್ ಮುಖ್ಯ ಅತಿಥಿಯಾಗಿದ್ದರು.


ಮಹಿಳಾ ಮಂಡಲಗಳ ಒಕ್ಕೂಟದ ಉಪಾಧ್ಯಕ್ಷೆ ಶ್ರೀಮತಿ ಮಧುಮತಿ ಬೊಳ್ಳೂರು ಸ್ವಾಗತಿಸಿ, ಹಿರಿಯ ನಿರ್ದೇಶಕಿ ಶ್ರೀಮತಿ ಚಂದ್ರಕಲಾ ಕುತ್ತಮೊಟ್ಟೆ ವಂದಿಸಿದರು. ಒಕ್ಕೂಟದ ಕಾರ್ಯದರ್ಶಿ ಶ್ರೀಮತಿ ಕಾಂತಿ ಮೋಹನ್ ಸಂಪಾಜೆ ಕಾರ್ಯಕ್ರಮ ನಿರೂಪಿಸಿದರು. ಶ್ರೀನಿಧಿ ಮಹಿಳಾ ಮಂಡಲದ ಸದಸ್ಯರು ಪ್ರಾರ್ಥನೆ ಹಾಡಿದರು.


ಸನ್ಮಾನ


ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಬೆಳ್ಳಾರೆ ಪೊಲೀಸ್ ಠಾಣೆಯ ಹೆಡ್‌ಕಾನ್‌ಸ್ಟೇಬಲ್ ಶ್ರೀಮತಿ ತೇಜಾವತಿ, ತಟ್ಟಿ ಹೆಣೆಯುವುದೇ ಮುಂತಾದ ಗುಡಿಕೈಗಾರಿಕಾ ಕ್ಷೇತ್ರದಲ್ಲಿ ಶ್ರೀಮತಿ ಮೋಂಟಿ ಚಿಕ್ಕಿನಡ್ಕ, ಬಸ್ ಕಂಡಕ್ಟರ್ ಶ್ರೀಮತಿ ಜಯಂತಿ ಕೊಯಿಕುಳಿ, ಸಾಹಿತಿ ಶ್ರೀಮತಿ ಚಂದ್ರಾವತಿ ಬಡ್ಡಡ್ಕ, ಪಿಗ್ಮಿ ಸಂಗ್ರಾಹಕಿ ಶ್ರೀಮತಿ ಜಯಂತಿ ಬೊಳಿಯಮಜಲು ಅವರನ್ನು ಸನ್ಮಾನಿಸಲಾಯಿತು.