ಆಲೆಟ್ಟಿ ನಾರ್ಕೋಡು ಸ.ಹಿ.ಪ್ರಾ.ಶಾಲೆಯಲ್ಲಿ ಎಲ್.ಕೆ.ಜಿ, ಯು.ಕೆ.ಜಿ ತರಗತಿ ಆರಂಭಿಸುವ ಪೂರ್ವ ಭಾವಿ ಸಭೆ-ನಿರ್ವಹಣಾ ಸಮಿತಿ ರಚನೆ

0

ಅಧ್ಯಕ್ಷ-ಚಂದ್ರಕಾಂತ ನಾರ್ಕೋಡು, ಕಾರ್ಯದರ್ಶಿ -ಸುನಿಲ್, ಖಜಾಂಜಿ -ತೀರ್ಥಕುಮಾರ್ ಕುಂಚಡ್ಕ

ಆಲೆಟ್ಟಿ ನಾರ್ಕೋಡು ಸ.ಹಿ.ಪ್ರಾ.ಶಾಲೆಯಲ್ಲಿ ನೂತನವಾಗಿ ಎಲ್.ಕೆ.ಜಿ, ಯು.ಕೆ.ಜಿ ತರಗತಿ ಪ್ರಾರಂಭಿಸುವ ಕುರಿತು ಪ್ರಥಮ ಹಂತದ ಪೂರ್ವ ಭಾವಿ ಸಭೆಯು ಮಾ.26 ರಂದು ನಡೆಯಿತು.


1925 ರಲ್ಲಿ ಆರಂಭಗೊಂಡ ಶಾಲೆಯು ಮುಂದಿನ 2025 ರಲ್ಲಿ 100 ವರ್ಷ ಪೂರೈಸಿ ಶತಮಾನೋತ್ಸವ ಆಚರಿಸುವ ಹೊಸ್ತಿಲಲ್ಲಿ ಇರುವುದು ಒಂದು ಕಡೆಯಾದರೆ ಇನ್ನೊಂದೆಡೆ ಮಕ್ಕಳ ಸಂಖ್ಯೆ ಕಡಿಮೆಯಾಗುವುದರಿಂದ ಶಾಲೆ ಮುಚ್ಚುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಸಾವಿರಾರು ವಿದ್ಯಾರ್ಥಿಗಳು ವಿದ್ಯಾರ್ಜನೆಗೈದು ಉನ್ನತ ಪದವಿ ಹುದ್ದೆಯನ್ನು ಗಳಿಸಿಕೊಂಡಿರುವ ಬಹಳಷ್ಟು ಮಂದಿ ಇದ್ದಾರೆ. ಇದಕ್ಕಾಗಿ ಶಾಲೆಯ ಉಳಿವಿಗಾಗಿ ಎಲ್.ಕೆ.ಜಿ,ಯು.ಕೆ.ಜಿ ಇಂಗ್ಲೀಷ್ ಮೀಡಿಯಂ ತರಗತಿ ಪ್ರಾರಂಭಿಸಿ ಶಾಲೆಯನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಇರುವುದು ಎಂಬ ಚಿಂತನೆಯ ಬಗ್ಗೆ ಚರ್ಚಿಸಲಾಯಿತು.


ಈ ಸಂದರ್ಭದಲ್ಲಿ ನಿವೃತ್ತ ಸಿ.ಇ.ಒ ಸುಧಾಮ ಆಲೆಟ್ಟಿ, ಎಸ್.ಡಿ.ಎಂ.ಸಿ. ಮಾಜಿ ಅಧ್ಯಕ್ಷ ಯತಿರಾಜ್ ಭೂತಕಲ್ಲು, ತಾ.ಪಂ.ಮಾಜಿ ಅಧ್ಯಕ್ಷ ಜಯಪ್ರಕಾಶ್ ಕುಂಚಡ್ಕ, ನಿವೃತ್ತ ಮುಖ್ಯ ಶಿಕ್ಷಕ ವೆಂಕಪ್ಪ ಮಾಸ್ತರ್ ಕುಂಚಡ್ಕ, ಪಂ.ಸದಸ್ಯರಾದ ವೀಣಾ ಆಲೆಟ್ಟಿ, ಮೀನಾಕ್ಷಿ ಕುಡೆಕಲ್ಲು,
ಎಸ್.ಡಿ.ಎಂ.ಸಿ.ಅಧ್ಯಕ್ಷ ಹುಕ್ರಪ್ಪ ಪೂಜಾರಿ ಕುದ್ಕುಳಿ, ತೀರ್ಥಕುಮಾರ್ ಕುಂಚಡ್ಕ, ಆನಂದ ಅಡ್ಪಂಗಾಯ, ಸತೀಶ್ಚಂದ್ರ ಕಲ್ಲೆಂಬಿ, ಜನಾರ್ದನ ಗೌಡ ನಾರ್ಕೋಡು,ಪ್ರವೀಣ್ ಕಲ್ಲೆಂಬಿ, ರಾಮಚಂದ್ರ ಆಲೆಟ್ಟಿ, ಸಂತೋಷ್ ಕೆ,ಬಾಲಚಂದ್ರ,ಅರುಣಾಚಲ ಭೂತಕಲ್ಲು, ರಾಮಚಂದ್ರ ಬಾಳೆಹಿತ್ಲು, ಪ್ರಶಾಂತ್ ಕೋಲ್ಚಾರು,ಅಶ್ವಿನ್ ಅಡ್ಪಂಗಾಯ,ರಾಮಣ್ಣ ಗೌಡ ಕೆ.ಆರ್, ಹರಿಶ್ಚಂದ್ರ ಆಲೆಟ್ಟಿ, ವಸಂತ ಬಾಳೆಹಿತ್ಲು, ಜನಾರ್ದನ ಪಡ್ಪು,
ಹುಕ್ರಪ್ಪ ಗೌಡ ನಾರ್ಕೋಡು,ಕೃಷ್ಣಪ್ಪ ಗುಡ್ಡೆಮನೆ, ಹಿಮಕರ, ಯಶವಂತ ಬಾಳೆಬಲ್ಪು,
ಗಂಗಾಧರ ನಾರ್ಕೋಡು, ಆಲೆಟ್ಟಿ, ಈಶ್ವರ ಗೌಡ, ತಾರನಾಥ ಕಲ್ಲೆಂಬಿ, ಉದಯಕುಮಾರ್,
ಮುಖ್ಯ ಶಿಕ್ಷಕಿ ಸುನಂದ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು. ಶಾಲಾ ನಿರ್ವಹಣಾ ಸಮಿತಿಯನ್ನು ರಚಿಸಲಾಯಿತು.


ಶಾಲಾ ಸಹ ಶಿಕ್ಷಕ ಸುನಿಲ್ ರವರು ಪ್ರಾಸ್ತಾವಿಕ ಮಾತುಗಳೊಂದಿಗೆ ವಿವರ ನೀಡಿದರು.
ಆಲೆಟ್ಟಿ ಪಂಚಾಯತ್ ಸದಸ್ಯ ಚಂದ್ರಕಾಂತ ನಾರ್ಕೋಡು ಸ್ವಾಗತಿಸಿದರು. ಸಹ ಶಿಕ್ಷಕಿ ಕಲ್ಪಲತಾ ವಂದಿಸಿದರು.
ಶಾಲಾ ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದವರು ಸಹಕರಿಸಿದರು.