ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಪುತ್ತೂರಿನ ಜಾಗ ಮರುವಶ, ಅತಿಕ್ರಮಣ ತೆರವು

0

ಪುತ್ತೂರಿನ ಬೊಳ್ವಾರಿನಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಸಂಬಂಧಿಸಿದ ಜಾಗವನ್ನು ಅತಿಕ್ರಮಣ ತೆರವುಗಳಿಸಿ ಮರು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದು ಬಂದಿದೆ.
ಹಲವು ವರ್ಷಗಳ ಹಿಂದೆ 1.57 ಎಕ್ರೆ ಜಾಗವನ್ನು ಪುತ್ತೂರಿನ ಬೊಳ್ವಾರಿನ ಮುಖ್ಯರಸ್ತೆಯ ಬಳಿ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಇರಿಸಲಾಗಿದ್ದು ಅದರ ಅತಿಕ್ರಮಣ ನಡೆದಿತ್ತೆನ್ನಲಾಗಿದೆ. ಈ ಜಾಗಕ್ಕೆ ಸಂಬಂಧ ಪಟ್ಟು 2014ರಲ್ಲಿ ಈ ಜಾಗದಲ್ಲಿರುವ ಅತಿಕ್ರಮಣ ತೆರವುಮಾಡಿ ಜಾಗವನ್ನು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವಶಕ್ಕೆ ಒಪ್ಪಿಸುವಂತೆ ಕೋರ್ಟ್ ಆದೇಶ ಆಗಿತ್ತು. ಆದರೆ ಈ ವೇಳೆ ಅತಿಕ್ರಮಣ ತೆರವು ಮಾಡಿರಲಿಲ್ಲ.

ಆದರೆ ಇದೀಗ ಹಿಂದೂ ಜಾಗರಣ ವೇದಿಕೆಯವರು ಮುಂದೆ ಬಂದು ಅತಿಕ್ರಮಣ ತೆರವಿಗೆ ಮನವಿ ಮಾಡಿದಲ್ಲದೆ ಸ್ವತಹ ಮುಂದೆ ನಿಂತು ಅಧಿಕಾರಿಗಳಿದ್ದು ಅಲ್ಲಿ ಅತಿಕ್ರಮಣ ಮಾಡಿಕೊಂಡ ಗುಜಿರಿ ಅಂಗಡಿಯನ್ನು ತೆರವು ಮಾಡಿದ್ದಾರೆ. ಈಗ ಸುಮಾರು 1.40 ಎಕ್ರೆ ಜಾಗ ಮರುವಶವಾಗಿದೆ ಎಂದು ತಿಳಿದು ಬಂದಿದೆ. ಸ್ವಲ್ಪ ಭಾಗ ಜಾಗದ ವ್ಯಾಜ್ಯ ಕೋರ್ಟ್ ನಲ್ಲಿರುವುದಾಗಿದೆ. ಜಾಗದ ಮರುವಶದ ಬಳಿಕ ಅದೇ ಜಾಗದಲ್ಲಿ ಆಶ್ಲೇಷ ಪೂಜೆ ಮತ್ತು ಜನಜಾಗೃತಿ ಸಭೆ ನಡೆಸಲಾಯಿತು. ದೇವಸ್ಥಾನದ ಜಾಗ ಮರುವಶ ಮಾಡಿಕೊಳ್ಳುವ ಕಾರ್ಯಾಚರಣೆಯಲ್ಲಿ ಹಿಂದೂ ಜಾಗರಣೆ ವೇದಿಕೆ ಮುಂದೆ ನಿಂತಿದ್ದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮಂಡಳಿ ನಿರ್ದೇಶನದಂತೆ ಈ ಕೆಲಸ ನಡೆದಿರುವುದಾಗಿ ತಿಳಿದುಬಂದಿದೆ.