ಸಿ.ಎಚ್.ಮಹಮೂದ್ ಜಾಲ್ಸೂರು ನಿಧನ

0

ಮರದಿಂದ ಬಿದ್ದು ತೀವ್ರ ಜಖಂಗೊಂಡಿದ್ದ ಜಾಲ್ಸೂರು ಗ್ರಾಮದ ಸಣ್ಣಕದಿಕೆ ನಿವಾಸಿ ಸಿ.ಎಚ್.ಮಹಮೂದ್ ಎಂಬವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ಘಟನೆ ವರದಿಯಾಗಿದೆ. ಅವರಿಗೆ 48 ವರ್ಷ ವಯಸ್ಸಾಗಿತ್ತು.


ಮಹಮೂದರು ಸುಮಾರು 10 ದಿನಗಳ ಹಿಂದೆ ಮನೆ ಬಳಿಯ ಮರವೊಂದರ ಗೆಲ್ಲು ಕಡಿಯುವಾಗ ಬಿದ್ದು ಜಖಂಗೊಂಡಿದ್ದರು. ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಅಲ್ಲಿಂದ ಹಿಂತಿರುಗಿ ಸುಳ್ಯಕ್ಕೆ ಕರೆತಂದು ಇಲ್ಲಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಾ.25 ರಂದು ರಾತ್ರಿ ಕೊನೆಯುಸಿರೆಳೆದರು.


ಮೃತರು ಪತ್ನಿ, ಪುತ್ರಿಯನ್ನು ಅಗಲಿದ್ದಾರೆ.