ಮಾ.29: ಮೊರಂಗಲ್ಲು ಮಹಮ್ಮಾಯಿ ದೇವಸ್ಥಾನದಲ್ಲಿ ದೇವಿಯ ಪೂಜಾ ಕಾರ್ಯಕ್ರಮ

0

ಆಲೆಟ್ಟಿ ಮೊರಂಗಲ್ಲು ಶ್ರೀ ಮಹಮ್ಮಾಯಿ ದೇವಸ್ಥಾನದಲ್ಲಿ ವರ್ಷಂಪ್ರತಿ ಜರುಗುವ ಶ್ರೀ ದೇವಿಯ ಮಹಾಪೂಜೆಯು ಮಾ.29 ರಂದು ನಡೆಯಲಿದೆ. ಮಾ.28 ರಂದು ಮಧ್ಯಾಹ್ನ ಉಪದೈವಗಳಿಗೆ ತಂಬಿಲ ಸೇವೆ,ರಾತ್ರಿ ಭಜನಾ ಕಾರ್ಯಕ್ರಮ ನಡೆದು ಶ್ರೀ ದೈವಗಳ ಭಂಡಾರ ತೆಗೆದು ಮಾರಿಕಳ ಪ್ರವೇಶವಾಗಲಿದೆ. ಮರುದಿನ ಪ್ರಾತ:ಕಾಲ ಮುದ್ರೆ ಒಪ್ಪಿಸುವುದು. ಬೆಳಗ್ಗೆ ದೇವದೂತರಿಗೆ ರಕ್ತತರ್ಪಣೆಯಾಗಿ ಮಧ್ಯಾಹ್ನ ಶ್ರೀ ದೇವಿಯ ದರ್ಶನ ಬಲಿ ನಡೆದು ‌ಮಹಾಪೂಜೆಯಾಗಿ ಪ್ರಸಾದ ವಿತರಣೆ ಹಾಗೂ ಅನ್ನ ಸಂತರ್ಪಣೆ ನಡೆಯಲಿರುವುದು.