SჄS ಗಾಂಧಿನಗರ ಯುನಿಟ್ ವತಿಯಿಂದ ನಮಾಝಿನ ಖಮೀಸ್ ವಿತರಣೆ ಹಾಗೂ ಸನ್ಮಾನ ಕಾರ್ಯಕ್ರಮ

0

ಪುಣ್ಯ ರಮಳಾನ್ ತಿಂಗಳಲ್ಲಿ ಸಾಂತ್ವನದ ಭಾಗವಾಗಿ ಗಾಂಧಿನಗರ ಯುನಿಟ್ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಅದರಲ್ಲಿ ಒಂದಾದ ನಮಾಝ್ ಖಮೀಸ್ ವಿತರಣೆ ಕಾರ್ಯಕ್ರಮ ಸುನ್ನೀ ಸೆಂಟರ್ ನಲ್ಲಿ ನಡೆಯಿತು.

ಯುನಿಟ್ ಉಪಾಧ್ಯಕ್ಷರಾದ ಸಯ್ಯಿದ್ ತ್ವಾಹಿರ್ ತಂಙಳ್ ಸಅದಿ ಸುಳ್ಯ ರವರ ದುವಾದೊಂದಿಗೆ ಚಾಲನೆ ನೀಡಿದರು.
ಸಯ್ಯಿದ್ ಝೈನುಲ್ ಆಬಿದ್ ತಂಙಳ್ ಜಯನಗರ ರವರು ನಮಾಜ್ ಉಡುಪು ವಿತರಣೆ ಮಾಡುವ ಮೂಲಕ ಉದ್ಘಾಟಿಸಿದರು.


ಇದೇ ಸಂಧರ್ಭದಲ್ಲಿ ಎಸ್ ವೈ ಎಸ್ ರಾಜ್ಯ ಸಮಿತಿ ಸದಸ್ಯರಾಗಿ ಆಯ್ಕೆ ಯಾದ ಸಿದ್ದೀಕ್ ಕಟ್ಟೆಕ್ಕಾರ್ ರವರಿಗೆ ಶಾಲು ಹೊದಿಸಿ ಅಭಿನಂದಿಸಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಹಾಜಿ ಜನತಾ ಮುಸ್ತಫಾ, ಹಮೀದ್ ಬೀಜ ಕೊಚ್ಚಿ, ಲತೀಫ್ ಸಖಾಫಿ ಗೊನಡ್ಕ, ನಿಝಾರ್ ಸಖಾಫಿ ಮುಡೊರು, ಜಬ್ಬಾರ್ ಸಖಾಫಿ ಅಜ್ಜಾವರ, ರಶೀದ್ ಝೈನಿ ಪೆರಾಜೆ, ಅಬೂಬಕ್ಕರ್ ಜಟ್ಟಿಪ್ಪಳ್ಳ,ಪವಾಝ್ ಕಟ್ಟತ್ತಾರು, ಅಬ್ದುಲ್ ರಹಿಮಾನ್ ಸಅದಿ,ಖಾದರ್ ಎಂ.ಟಿ, ಹಾರಿಸ್ ಎಸ್.ಎಚ್, ರಶೀದ್ ಕೆರೆಮೂಲೆ, ಹನೀಫ್ ಕಲ್ಳಪಳ್ಳಿ, ಮುನೀರ್ ಆಟೋ,ಕಬೀರ್ ಜಟ್ಟಿಪ್ಪಳ್ಳ, ಅಝೀಝ್ ಜಯನಗರ ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here