ಸುಳ್ಯ ಲಯನ್ಸ್ ಕ್ಲಬ್ ನಿಂದ ಮನೆ ಹಸ್ತಾಂತರ

0

ಸುಳ್ಯ ಲಯನ್ಸ್ ಕ್ಲಬ್ ಗೆ ಜಿಲ್ಲಾ ಲಯನ್ಸ್ ಗವರ್ನರ್ ಸಂಜಿತ್ ಶೆಟ್ಟಿ ದಂಪತಿಗಳು ಮಾ. 26 ರಂದು ಭೇಟಿ ನೀಡಿದ ಸಂದರ್ಭದಲ್ಲಿ ಸೋಣಂಗೆರಿಯ ಬೆಲ್ಯ ಗಿರಿಜರವರಿಗೆ ಸುಳ್ಯ ಲಯನ್ಸ್ ಕ್ಲಬ್ ನಿಂದ ಕೊಡ ಮಾಡಿದ ಮನೆ ಹಸ್ತಾಂತರ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಗಂಗಾಧರ ರೈ ಸೋಣಂಗೆರಿ, ವಸಂತ್ ಕುಮಾರ್ ಶೆಟ್ಟಿ, ಅನಿಲ್ ಕುಮಾರ್, ರಾಮ್ ಮೋಹನ ಆಳ್ವ, ಜಯರಾಮ ದೇರಪ್ಪಜ್ಜನಮನೆ, ಸುಳ್ಯ ಲಯನ್ಸ್ ಕ್ಲಬ್ ಅಧ್ಯಕ್ಷೆ ಶ್ರೀಮತಿ ರೂಪಶ್ರೀ ಜೆ. ರೈ, ಕಾರ್ಯದರ್ಶಿ ದೀಪಕ್ ಕುತ್ತಮೊಟ್ಟೆ, ಖಜಾಂಜಿ ಡಾ. ಲಕ್ಷ್ಮೀಶ್ ಸೇರಿದಂತೆ ಸುಳ್ಯ ಲಯನ್ಸ್ ಕ್ಲಬ್ ನ ಸದಸ್ಯರು ಉಪಸ್ಥಿತರಿದ್ದರು.