ಬಳ್ಳಡ್ಕ : ಟ್ರಾನ್ಸ್ ಫಾರ್ಮರ್ ಕಿಡಿಯಿಂದ ಹೊತ್ತಿ ಉರಿದ ರಬ್ಬರ್ ಗುಡ್ಡೆ

0

ಉಬರಡ್ಕ ಮಿತ್ತೂರು ಗ್ರಾಮದ ಬಳ್ಳಡ್ಕ ಅನಿಲ್ ರವರ ಮನೆಯ ಬಳಿ ಟ್ರಾನ್ಸ್ ಫಾರ್ಮರ್ ನ ತಂತಿ ಹಳತ್ತಾಗಿ ಶಾರ್ಟ್ ಸರ್ಕ್ಯೂಟ್ ನಿಂದ ಉಂಟಾದ ಕಿಡಿಯಿಂದಾಗಿ ರಬ್ಬರ್ ಗುಡ್ಡ ಹೊತ್ತಿ ಉರಿದ ಘಟನೆ ಮಾ.26 ರಂದು ನಡೆಯಿತು.

ಅಗ್ನಿಶಾಮಕ ದಳ ಮತ್ತು ಸ್ಥಳೀಯರಾದ ಗುಡ್ಡಪ್ಪ ಸೂoತೋಡು, ಜಯಪ್ರಕಾಶ್ ಬೋಮ್ಮೆಟ್ಟಿ, ವಿದ್ಯಾಧರ ಹರ್ಲಡ್ಕ, ಜಿತೇoದ್ರ ಬಳ್ಳಡ್ಕ, ತೀರ್ಥವರ್ಣ ಬಳ್ಳಡ್ಕ, ಶಿವಪ್ರಸಾದ್ ಪಡ್ಪು, ವಿಜಯಕುಮಾರ್ ಪಡ್ಪು, ಗಣೇಶ್ ಶೆಟ್ಟಿ ಬಳ್ಳಡ್ಕ, ವರಪ್ರಸಾದ್ ಬಳ್ಳಡ್ಕ, ಲೋಹಿತ್ ಬಳ್ಳಡ್ಕ, ಈಶ್ವರಪ್ಪ ಬಳ್ಳಡ್ಕ, ಮನಮೋಹನ ಬಳ್ಳಡ್ಕ, ದಿವಿಷ್ ಬಳ್ಳಡ್ಕ, ಮಹದೇವ್ ಬಳ್ಳಡ್ಕ, ಕರುಣಾಕರ ಸೂoತೋಡು, ಅಭಿಜ್ಞ ಬೋಮ್ಮೆಟ್ಟಿ, ನವೀನ್ ರೈ ಸೂoತೋಡು ಹಾಗು ಊರವರ ಸಹಕಾರದಿಂದ ಬೆಂಕಿಯನ್ನು ನಂದಿಸಲಾಯಿತು. ಟ್ರಾನ್ಸ್ ಫಾರ್ಮರ್ ನ ತಂತಿ ಹಳತಾಗಿ ಶಾರ್ಟ್ ಸರ್ಕ್ಯೂಟ್ ಆಗಲು ಕಾರಣ ಎಂದು ಊರವರು ಹೇಳುತ್ತಿದ್ದಾರೆ.

“ಸುಮಾರು 2 ವರ್ಷಗಳ ಹಿಂದೆಯೇ ಮೆಸ್ಕಾಂಗೆ ತಂತಿ ಹಳತಾಗಿದ್ದು ಬದಲಾಯಿಸಲು ಮನವಿ ಮಾಡಿದ್ದು, ಮೆಸ್ಕಾಂನವರು ನಮ್ಮಲ್ಲಿ ತಂತಿ ಇಲ್ಲ ಊರವರೇ ಸರಿ ಮಾಡಿಸಿಕೊಳ್ಳಿ ಎಂದು ಉಡಾಫೆಯ ಉತ್ತರ ನೀಡಿದ್ದಾರೆ “ಎಂದು ಗ್ರಾ.ಪಂ ಸದಸ್ಯ ಅನಿಲ್ ಬಳ್ಳಡ್ಕ ತಿಳಿಸಿದ್ದಾರೆ.