ಕುಡೆಕಲ್ಲು ತರವಾಡು ಮನೆಯ ವಿಷ್ಣುಮೂರ್ತಿ ದೈವಸ್ಥಾನದಲ್ಲಿ ಶ್ರೀ ದೈವಗಳ ಭಕ್ತಿ ಸಂಭ್ರಮದ ಕಳಿಯಾಟ ಮಹೋತ್ಸವ

0

ಆಲೆಟ್ಟಿ ಗ್ರಾಮದ ಪ್ರತಿಷ್ಠಿತ ಕುಡೆಕಲ್ಲು ಮನೆತನದ ಶ್ರೀ ವಿಷ್ಣುಮೂರ್ತಿ ದೈವಸ್ಥಾನದಲ್ಲಿ ಮಾಮೂಲು ಪ್ರಕಾರ ನಡೆಯುವ ಶ್ರೀ ವಿಷ್ಣುಮೂರ್ತಿ ಹಾಗೂ ಉಪದೈವಗಳ ಕಳಿಯಾಟ ಮಹೋತ್ಸವವು ಮಾ.24 ರಿಂದ 26 ರತನಕ ಜರುಗಿತು.


ಮಾ.24 ರಂದು ಮಧ್ಯಾಹ್ನ ಶ್ರೀ ವೆಂಕಟರಮಣ ದೇವರ ಹರಿಸೇವೆಯಾಗಿ ರಾತ್ರಿ ಕಳಿಯಾಟಕ್ಕೆ ಕೂಡಿ ಉಗ್ರಾಣ ತುಂಬುವ ಕಾರ್ಯಕ್ರಮ ನಡೆಯಿತು.
ನಂತರ ಶ್ರೀ ವಯನಾಟ್ ಕುಲವನ್ ದೈವಸ್ಥಾನದಿಂದ ಕಲಶ ತರುವ ಕಾರ್ಯಕ್ರಮ ನಡೆದು ರಾತ್ರಿ
ಶ್ರೀ ವಿಷ್ಣುಮೂರ್ತಿ ದೈವ ದ ಕುಲ್ಚಾಟವಾಗಿ ಗುರು ಕಾರ್ನೋರು ದೈವದ ಕೋಲ ನಡೆಯಿತು.


ಮಾ.25 ರಂದು ಪೂರ್ವಾಹ್ನ ಶ್ರೀ ಪೊಟ್ಟನ್ ದೈವದ ಕೋಲವಾಗಿ ಅಪರಾಹ್ನ ಶ್ರೀ ರಕ್ತೇಶ್ವರೀ ದೈವದ ಕೋಲ ನಡೆದು ರಾತ್ರಿ ಶ್ರೀ ವಿಷ್ಣುಮೂರ್ತಿ ದೈವದ ಕೋಲ ನಡೆದು ,ಶ್ರೀ ಧರ್ಮದೈವ, ಶ್ರೀ ಪಾಷಾಣಮೂರ್ತಿ ದೈವಗಳ ಕೋಲ ಜರುಗಿತು. ಮರುದಿನ ಬೆಳಗ್ಗೆ ಶ್ರೀ ವಿಷ್ಣುಮೂರ್ತಿ ದೈವದ ಕುಲ್ಚಾಟವಾಗಿ ರಾತ್ರಿ ಗಂಟೆ 9.00 ರಿಂದ ಶ್ರೀ ವಿಷ್ಣುಮೂರ್ತಿ ದೈವ,‌
ಶ್ರೀ ಧರ್ಮದೈವ, ಶ್ರೀ ಪಾಷಾಣಮೂರ್ತಿ ದೈವಗಳ ಕಳಿಯಾಟ ನಡೆದು ಶ್ರೀ ವಿಷ್ಣುಮೂರ್ತಿ ದೈವದ ಕಲಶವಾಗಿ ಭಕ್ತಾದಿಗಳಿಂದ ಹರಕೆ ಸಮರ್ಪಣೆಯಾಗಿ ಪ್ರಸಾದ ವಿತರಣೆಯಾಯಿತು.

ಈ ಸಂದರ್ಭದಲ್ಲಿ ಹರಕೆಯ ತುಲಾಭಾರ ಸೇವೆಯು ನಡೆದು ಮರುದಿನ ಬೆಳಿಗ್ಗೆ ಶ್ರೀ ಪಂಜುರ್ಲಿ ದೈವದ ಕೋಲವು ನಡೆಯಿತು. ಕಳಿಯಾಟ ಮಹೋತ್ಸವ ದ ಸದ್ರಿ ದಿನಗಳಲ್ಲಿ ಸಾರ್ವಜನಿಕ ಅನ್ನದಾನವು ನಿರಂತರವಾಗಿ ನಡೆಯಿತು. ದೈವಸ್ಥಾನದ ಯಜಮಾನರು, ಆಡಳ್ತೆದಾರರಾದ ಕುಡೆಕಲ್ಲು ವಿಶ್ವನಾಥ ಗೌಡ ಹಾಗೂ ಕುಟುಂಬದ ಹಿರಿಯ ಕಿರಿಯ ಸದಸ್ಯರು ಉಪಸ್ಥಿತರಿದ್ದರು. ಆಗಮಿಸಿದ ಸರ್ವರನ್ನೂ ಕುಟುಂಬಸ್ಥರು ಸ್ವಾಗತಿಸಿದರು.

LEAVE A REPLY

Please enter your comment!
Please enter your name here