ಬೆಂಗಳೂರುನಲ್ಲಿ ನಡೆದ ಮ್ಯಾರಥಾನ್ ನಲ್ಲಿ ಜಸ್ಮಿತಾ ಕೊಡೆಂಕಿರಿಗೆ ದ್ವಿತೀಯ ಸ್ಥಾನ

0


ಮಾರ್ಚ್ 26 ರಂದು ಬೆಂಗಳೂರುನಲ್ಲಿ ನಡೆದ 18 ಕಿ. ಮೀ. ಮ್ಯಾರಥಾನ್ ಸ್ಪರ್ಧೆಯಲ್ಲಿ ಬಳ್ಪ ಗ್ರಾಮದ ಜಸ್ಮಿತಾ ಕೊಡೆಂಕಿರಿರ ದ್ವಿತೀಯ ಸ್ಥಾನದೊಂದಿಗೆ ₹7500/ ನಗದು ಪುರಸ್ಕಾರ ಹಾಗೂ ಶಾಶ್ವತ ಫಲಕ ಪಡೆದುಕೊಂಡಿದ್ದಾರೆ. ಕೆ.ಎಸ್.ಎಸ್ ಕಾಲೇಜು ಸುಬ್ರಹ್ಮಣ್ಯ ಹಾಗೂ ಮೂಡಬಿದಿರೆಯ ಆಳ್ವಾಸ್ ಕಾಲೇಜ್ ನ ಹಳೆ ವಿದ್ಯಾರ್ಥಿನಿಯಾದ ಇವರು ಮಂಗಳೂರಿನ ಕೇಂಬ್ರಿಡ್ಜ್ ವಿದ್ಯಾ ಸಂಸ್ಥೆಯಲ್ಲಿ ದೈಹಿಕ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಬಳ್ಪ ಗ್ರಾಮದ ಕೊಡೆಂಕಿರಿ ವಾಚಣ್ಣ ಗೌಡ ಮತ್ತು ದಮಯಂತಿ ದಂಪತಿಯ ಪುತ್ರಿ.