ಅಮರಮುಡ್ನೂರು: ಶಶಿಧರ ಕಡಪಜಾಲು (ಬೊಳ್ಕೋಡಿ) ನಿಧನ

0

ಅಮರಮುಡ್ನೂರು ಗ್ರಾಮದ ಕಡಪಜಾಲು (ಬೊಳ್ಕೋಡಿ) ನಿವಾಸಿ ದಿ.ಶಿವಪ್ಪ ಗೌಡ ಅಮೆಬೈಲು ರವರ ಪುತ್ರ ಶಶಿಧರ ಎಂಬವರು ಹೃದಯಾಘಾತದಿಂದ ತನ್ನ ಮನೆಯಲ್ಲಿ ಇಂದು ಮುಂಜಾನೆ ನಿಧನರಾದರು. ಅವರಿಗೆ 56 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ, ಮೂವರು ಪುತ್ರಿ ಯರನ್ನು ಹಾಗೂ ಓರ್ವ ಸಹೋದರ ಮತ್ತು ಬಂಧು ಮಿತ್ರರನ್ನು ಅಗಲಿದ್ದಾರೆ.