ಸುಳ್ಯ ಪಿ ಎಫ್ ಐ ಕಚೇರಿಯನ್ನು ಜಪ್ತಿ ಮಾಡಿದ ಎನ್ ಐ ಎ ಅಧಿಕಾರಿಗಳು

0

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಎನ್ ಐಎ ತಂಡ ಸುಳ್ಯ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕಚೇರಿಯನ್ನು ಜಪ್ತಿ ಮಾಡಿದೆ.


ಸುಳ್ಯ ಗಾಂಧಿನಗರ ಅಲೆಟ್ಟಿ ರಸ್ತೆಯ ತಾಹಿರಾ ಕಾಂಪ್ಲೆಕ್ಸ್​ನ ಮೊದಲ ಮಹಡಿಯಲ್ಲಿದ್ದ ಪಿಎಫ್‌ಐ ಕಚೇರಿಯನ್ನು ಎನ್ ಐಎ ವಶಕ್ಕೆ ಪಡೆದ ಬಗ್ಗೆ ವರದಿಯಾಗಿದೆ.
ಆಸ್ತಿಯನ್ನು ಗುತ್ತಿಗೆ ಅಥವಾ ಬಾಡಿಗೆಗೆ ನೀಡಬಾರದು ಪರಾಬಾರೆ ಮಾಡಬಾರದು ಎಂದು ಆದೇಶಿಸಲಾಗಿದೆ. ಯಾವುದೇ ಆಸ್ತಿಯನ್ನು ಕಚೇರಿಯಿಂದ ಸ್ಥಳಾಂತರಿಸುವುದು ಅಥವಾ ನವೀಕರಣ ಕಾರ್ಯವನ್ನು ಕೈಗೊಳ್ಳದಂತೆ ನಿರ್ದೇಶಿಸಲಾಗಿದೆ ಎನ್ನಲಾಗಿದೆ.


ಆಸ್ತಿಯ ಜಫ್ತಿ ಪ್ರತಿಯನ್ನು ಜಿಲ್ಲಾಧಿಕಾರಿ,ಎಸ್ಪಿ ಹಾಗೂ ಕಟ್ಟಡ ಮಾಲಕರಿಗೆ ನೀಡಲಾಗಿದೆ ಎನ್ನಲಾಗಿದೆ.