ಬಿದ್ದು ಸಿಕ್ಕಿದ ಮೊಬೈಲ್ ಫೋನನ್ನು ಸುಳ್ಯ ಠಾಣೆಗೆ ತಂದು ಒಪ್ಪಿಸಿದ ನಿವೃತ್ತ ಪೊಲೀಸ್ ಉಪನಿರೀಕ್ಷಕ

0

ಸುಬ್ರಹ್ಮಣ್ಯ ಪೊಲೀಸ್ ಠಾಣಾ ನಿವೃತ್ತ ಉಪನಿರೀಕ್ಷಕ ಗೋಪಾಲ್ ಭಂಡಾರಿಯವರಿಗೆ ಇಂದು ಸುಳ್ಯ ಪೇಟೆಯಲ್ಲಿ ಮೊಬೈಲ್ ಫೋನ್ ಬಿದ್ದು ಸಿಕ್ಕಿದ್ದು ಅವರು ಕೂಡಲೇ ಅದನ್ನು ಸುಳ್ಯ ಪೊಲೀಸ್ ಠಾಣೆಗೆ ತಂದು ಒಪ್ಪಿಸಿರುತ್ತಾರೆ.

ಮೊಬೈಲ್ ಫೋನ್ ಸುಮಾರು 25 ಸಾವಿರ ರೂಗಿಂತ ಹೆಚ್ಚು ಮೌಲ್ಯವಿದ್ದು ಮೊಬೈಲ್ ನಲ್ಲಿ ಇರುವ ಮಾಹಿತಿ ಮೇರೆಗೆ ಮೊಬೈಲ್ ಕಳೆದುಕೊಂಡ ವ್ಯಕ್ತಿಯನ್ನು ಸಂಪರ್ಕಿಸಿದಾಗ ಅವರು ಪುತ್ತೂರು ಮೂಲದವರು ಎಂದು ತಿಳಿದುಬಂದಿದೆ. ಬಳಿಕ ಅವರನ್ನು ಸುಳ್ಯ ಠಾಣೆಗೆ ಕರೆಸಿ ಫೋನನ್ನು ಅವರಿಗೆ ಹಸ್ತಾಂತರಿಸಿದ್ದಾರೆ ಎಂದು ತಿಳಿದು ಬಂದಿದೆ.