ಸಂಪಾಜೆ : ಚೆಡಾವು ಕೊರಗಜ್ಜ ದೈವದ ಸನ್ನಿಧಿಯಲ್ಲಿ ವಾರ್ಷಿಕ ನೇಮೋತ್ಸವ

0


ಕೊಡಗು ಸಂಪಾಜೆ ಗ್ರಾಮದ ಚೆಡಾವು ಸ್ವಾಮಿ ಕೊರಗಜ್ಜ ದೈವದ ಸನ್ನಿಧಿಯಲ್ಲಿ ವಾರ್ಷಿಕ ನೇಮೋತ್ಸವ ಕಾರ್ಯಕ್ರಮ ಮಾ. ೨೫ ಮತ್ತು ೨೬ರಂದು ನಡೆಯಿತು.
ಶನಿವಾರ ಸಂಜೆ ಸ್ವಾಮಿ ಗುಳಿಗ ಬಂಟ, ವರ್ಣಾರ ಪಂಜುರ್ಲಿ ದೈವ, ಕಲ್ಲುರ್ಟಿ ದೈವದ ನರ್ತನ ಸೇವೆ ನಡೆದು, ಮರುದಿನ ಬೆಳಗ್ಗೆ ಕಾರಣಿಕ ದೈವ ಸ್ವಾಮಿ ಕೊರಗಜ್ಜ ದೈವದ ನೇಮೋತ್ಸವ ನಡೆಯಿತು.ಊರ, ಪರವೂರ ಸಾವಿರಾರು ಭಕ್ತಾಧಿಗಳು ಆಗಮಿಸಿ ದೈವಗಳ ಸಿರಿ ಗಂಧ ಪ್ರಸಾದ ಸ್ವೀಕರಿಸಿದರು.ನಂತರ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.