ನಡುಗಲ್ಲಿನಲ್ಲಿ ಬಟ್ಟೆ ಚೀಲ ತಯಾರಿಕಾ ಘಟಕ ಉದ್ಘಾಟನೆ

0

ದೀಪ ಸಂಜೀವಿನಿ ಮಹಿಳೆಯರ ಸಂಘದ ನೇತೃತ್ವ

ಅಮರ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಗುತ್ತಿಗಾರು ಇಲ್ಲಿನ ದೀಪ ಸಂಜೀವಿನಿ ಮಹಿಳೆಯರು ಸೇರಿ ಸ್ತ್ರೀ ಸಾಮರ್ಥ್ಯ ಯೋಜನೆಯಡಿಯಲ್ಲಿ ಬಟ್ಟೆ ಚೀಲ ತಯಾರಿಸಲು ಮುಂದಾಗಿದ್ದು ಮಾ. 30ರಂದು ನಡುಗಲ್ಲಿನಲ್ಲಿ ಬಟ್ಟೆ ಚೀಲ ತಯಾರಿಕಾ ಘಟಕವು ಉದ್ಘಾಟನೆಗೊಂಡಿತು. ಮರಕತ ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಚಂದ್ರಶೇಖರ ಮಾವಿನಕಟ್ಟೆ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ವೇದಿಕೆಯಲ್ಲಿ ಪಯಸ್ವಿನಿ ಸಂಜೀವಿನಿ ತಾಲೂಕು ಮಟ್ಟದ ಅಧ್ಯಕ್ಷರಾದ ಯಶೋದಾ ಬಾಳೆಗುಡ್ಡೆ, ಅಮರ ಸಂಜೀವಿನಿ ಒಕ್ಕೂಟದ ಅದ್ಯಕ್ಷೆ ದಿವ್ಯ ಸುಜನ್ ಗುಡ್ಡೆಮನೆ, NRLM ತಾಲೂಕು ಕಾರ್ಯಕ್ರಮ ಸಂಯೋಜಕಿ ಶ್ರೀಮತಿ ಶ್ವೇತಾ, ಅಮೂಲ್ಯ ಸಾಕ್ಷರತಾ ಕೇಂದ್ರ ಸುಳ್ಯ ಇದರ ಶ್ರೀಮತಿ ಸುಜಾತ, ದೀಪ ಸಂಜೀವಿನಿ ಅಧ್ಯಕ್ಷೆ ಇಂದಿರಾ ಬಾಳುಗೋಡು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಆಜಾದಿ ಕ ಅಮೃತ ಮಹೋತ್ಸವ 2.0 ಅಂಗವಾಗಿ ಡಿಜಿಟಲ್ ವಹಿವಾಟು ಉತ್ತೇಜಿಸುವ ಅಭಿಯಾನ ಹಮ್ಮಿಕೊಳ್ಳಲಾಯಿತು. ಕಾರ್ಯ ಕ್ರಮದಲ್ಲಿ ಶ್ರೀ ವಿಜಯ ಚಾರ್ಮಾತ, ಪ್ರಮೀಳ ಬಾಸ್ಕರ ಎರ್ದಡ್ಕ,ಲೀಲಾವತಿ ಅಂಜೇರಿ,ಹರೀಶ್ ಕೊಯಿಲ, ಲತಾ ಆಜಡ್ಕ, ಒಕ್ಕೂಟದ ಕಾರ್ಯದರ್ಶಿ ಯಮಿತ ಪೂರ್ಣಚಂದ್ರ ಪೈಕ, ಸಂಜೀವಿನಿ MBK ಮಿತ್ರಕುಮಾರಿ ಚಿಕ್ಮುಳಿ,LCRP ಶಾರದ ನಡುಗಲ್ಲು ಹಾಗೂ ದಿವ್ಯ ಹರೀಶ್ ಚತ್ರಪ್ಪಾಡಿ,ಸಂಜೀವಿನಿ ಮಹಿಳೆಯರು ಸೇರಿದಂತೆ ಈ ಬಗ್ಗೆ ಮಾಹಿತಿ ಪಡೆಯಲು ನೆಲ್ಲೂರು ಕೆಮ್ರಾಜೆ ಯ ಸಂಜೀವಿನಿ ಸದಸ್ಯೆ ಸೌಮ್ಯ ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು. ಇಂದಿರಾ ಬಾಳುಗೋಡು ಪ್ರಾರ್ಥಿಸಿ, ತೃಪ್ತಿ ನಡುಗಲ್ಲು ವಂದಿಸಿದರು LCRP ಶಾರದ ನಡುಗಲ್ಲು ಕಾರ್ಯಕ್ರಮ ನಿರೂಪಿಸಿದರು.