ಏ. 2: ಬೆಳ್ಳಾರೆಯ ಪಂಜಿಗಾರಿನಲ್ಲಿ ಮೀನಾ ಪೆಟ್ರೋ ಫ್ಯೂಯೆಲ್ಸ್ ಶುಭಾರಂಭ

0

ಉದ್ಯಮಿ, ಬೆಳ್ಳಾರೆ ಮೀನಾ ಎಂಟರ್ಪ್ರೈಸಸ್ ನ ಮಾಲಕರಾದ ವಿ. ಗಣೇಶ್ ಭಟ್ ಮಾಲಕತ್ವದ ನಯಾರ ಎನರ್ಜಿ ಸಂಸ್ಥೆಯ ಮೀನಾ ಪೆಟ್ರೋ ಫ್ಯೂಯೆಲ್ಸ್ ಏ. 2ರಂದು ಶುಭಾರಂಭಗೊಳ್ಳಲಿದೆ.
ಸಂಸ್ಥೆಯನ್ನು ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್. ಅಂಗಾರ ಉದ್ಘಾಟಿಸಲಿದ್ದಾರೆ. ಕಳಂಜ ಗ್ರಾ.ಪಂ. ಅಧ್ಯಕ್ಷ ಪ್ರಶಾಂತ್ ಕುಮಾರ್ ಕಿಲಂಗೋಡಿ ಸಭಾಧ್ಯಕ್ಷತೆ ವಹಿಸಲಿದ್ದಾರೆ. ಬೆಳ್ಳಾರೆ ಗ್ರಾ.ಪಂ. ಅಧ್ಯಕ್ಷ ಚಂದ್ರಶೇಖರ ಪನ್ನೆ, ಕೊಡಿಯಾಲ ಗ್ರಾ.ಪಂ. ಅಧ್ಯಕ್ಷ ಪ್ರದೀಪ್ ರೈ ಅಜಿರಂಗಳ, ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಪಿ.ಜಿ.ಎಸ್.ಎನ್. ಪ್ರಸಾದ್, ನಯಾರ ಎನರ್ಜಿ ಪ್ರೈ.ಲಿ. ಮಂಗಳೂರು ಇದರ ವಿಭಾಗೀಯ ವ್ಯವಸ್ಥಾಪಕ ಗಣೇಶ್ ಗೌಡರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಪದ್ಮಶ್ರೀ ಪುರಸ್ಕೃತ ಹರೆಕಳ ಹಾಜಬ್ಬ ವಿಶೇಷ ಆಹ್ವಾನಿತರಾಗಿ ಭಾಗವಹಿಸಲಿದ್ದಾರೆ ಎಂದು ಸಂಸ್ಥೆಯ ಮಾಲಕರಾದ ವಿ. ಗಣೇಶ್ ಭಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.