ರೋಟರಿ ಸುಳ್ಯ ಸಿಟಿಗೆ ಜಿಲ್ಲಾ ಗವರ್ನರ್ ಭೇಟಿ, ಡಾ.ರಘುರಾಮ ಮಾಣಿಬೆಟ್ಟುರವರಿಗೆ ರೋಟರಿ ಜೀವಮಾನ ಸಾಧಕ ಪ್ರಶಸ್ತಿ*

0

ರೋಟರಿ ಸುಳ್ಯ ಸಿಟಿಗೆ ರೋಟರಿ ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ್ ಭೇಟಿ ಮತ್ತು ಸುಳ್ಯದ ಹಿರಿಯ ವೈದ್ಯ ಡಾ.ರಘುರಾಮ ಮಾಣಿಬೆಟ್ಟುರವರಿಗೆ ರೋಟರಿ ಸುಳ್ಯ ಸಿಟಿ ಜೀವಮಾನ ಸಾಧಕ ಪ್ರಶಸ್ತಿ ಪ್ರದಾನ ಸಮಾರಂಭ ಮಾ. 30ರಂದು ನಡೆಯಿತು.ರೋಟರಿ ಕ್ಲಬ್ ಸುಳ್ಯ ಸಿಟಿ ಅಧ್ಯಕ್ಷ ಪಿ.ಮುರಳೀಧರ ರೈ ಅಧ್ಯಕ್ಷತೆ ವಹಿಸಿದ್ದರು.

ರೋಟರಿ ಅಸಿಸ್ಟೆಂಟ್ ಗವರ್ನರ್ ಶಿವರಾಮ ಏನೆಕಲ್ಲು, ಝೋನಲ್ ಲೆಪ್ಟಿನೆಂಟ್ ಪ್ರೀತಮ್‌.ಡಿ.ಕೆ, ಜಿಎಸ್‌ಆರ್ ಡಾ.ಕೇಶವ ಪಿ.ಕೆ, ವಾಣಿ ಕಾರಂತ್ ಅತಿಥಿಗಳಾಗಿ ಭಾಗವಹಿಸಿದ್ದರು.

ರೋಟರಿ ಕ್ಲಬ್ ಸುಳ್ಯ ಸಿಟಿ ಕಾರ್ಯದರ್ಶಿ ಶಿವಪ್ರಸಾದ್ ಕೆ.ವಿ, ನಿಯೋಜಿತ ಅಧ್ಯಕ್ಷ ಗಿರೀಶ್ ನಾರ್ಕೋಡ್, ಮೀರಾ ಮುರಳೀಧರ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಧ್ಯಕ್ಷ ಮುರಳೀಧರ ರೈ ಸ್ವಾಗತಿಸಿ, ಅವಾರ್ಡ್ ಕಮಿಟಿ ಚೆಯರ್ ಮೆನ್ ಶ್ಯಾಮ್ ಭಟ್ ಪ್ರಶಸ್ತಿ ವಿಜೇತರ ಪರಿಚಯ ಮಾಡಿದರು, ಕಾರ್ಯದರ್ಶಿ ಶಿವಪ್ರಸಾದ್ ಕೆ.ವಿ.ವಂದಿಸಿದರು. ಅರುಣಾ ಪ್ರಮೋದ್ ಹಾಗು ಸವಿತಾ ನಾರ್ಕೋಡು ಕಾರ್ಯಕ್ರಮ ನಿರೂಪಿಸಿದರು.