ಎ.3ರಿಂದ ಸುಳ್ಯದ ಅಂಬಿಕಾ ಕ್ರಿಕೆಟ್ ಅಕಾಡೆಮಿ ವತಿಯಿಂದ ಕ್ರಿಕೆಟ್ ತರಬೇತಿ ಶಿಬಿರ

0

ಸುಳ್ಯದ ಅಂಬಿಕಾ ಕ್ರಿಕೆಟ್ ಅಕಾಡೆಮಿ ವತಿಯಿಂದ ಒಂದು ತಿಂಗಳ ಕ್ರಿಕೆಟ್ ತರಬೇತಿ ಶಿಬಿರ ಎ.3ರಂದು ಆರಂಭಗೊಳ್ಳಲಿದೆ. ಸುಳ್ಯದ ಯುವಜನ ಸಂಯುಕ್ತ ಮಂಡಳಿ( ಜೂ.ಕಾಲೇಜು) ಕ್ರೀಡಾಂಗಣದಲ್ಲಿ ಎ.3ರಿಂದ ಮೇ.3ರವರೆಗೆ ಈ ತರಬೇತಿ ಶಿಬಿರ ನಡೆಯಲಿದೆ.

18ವರುಷದೊಳಗಿನ ಆಸಕ್ತರು ಪಾಸ್‌ಪೋರ್ಟ್ ಸೈಜ್ ಪೊಟೋ ಮತ್ತು ಆಧಾರ್ ಕಾರ್ಡ್ ಪ್ರತಿ,ದಾಖಲಾತಿ ಶುಲ್ಕ ಒಂದು ಸಾವಿರದೊಂದಿಗೆ ಅಂಬಿಕಾ ಮೋಟಾರ್ ಡ್ರೈವಿಂಗ್ ಸ್ಕೂಲ್ ನ್ನು ಸಂಪರ್ಕಿಸಬಹುದೆಂದು ಸಂಘಟಕರು ತಿಳಿಸಿದ್ದಾರೆ.