ಮಾನವೀಯತೆ ಮೆರೆದ ವಿ.ಹೆಚ್.ಪಿ. ಕಾರ್ಯಕರ್ತ ಪುನೀತ್ ಕುಕ್ಕುಜಡ್ಕ

0

ಕುಕ್ಕುಜಡ್ಕ ಸುಳ್ಯ ರಸ್ತೆಯಲ್ಲಿ ಮಾ. 30 ರಂದು ಯುವಕನೊಬ್ಬ ತನ್ನ ಬೈಕ್ ಸ್ಕಿಡ್ ಆಗಿ ಸ್ಮೃತಿ ತಪ್ಪಿ ಬಿದ್ದಿದ್ದರು, ಇದನ್ನು ಗಮನಿಸಿದ ನಮ್ಮ ವಿಶ್ವ ಹಿಂದೂ ಪರಿಷತ್ ಬಜರಂಗದಳದ ವಜ್ರ ಕಾಯ ಶಾಖೆ ಚೊಕ್ಕಾ ಡಿಪದವು ಇದರ ಕಾರ್ಯಕರ್ತ ಪುನೀತ್ ಕುಕ್ಕಜಡ್ಕ ಎನ್ನುವ ಆಟೋ ಚಾಲಕನಾದ ಈ ಯುವಕ ಬಿದ್ದಿರುವ ಯುವಕನನ್ನು ತಕ್ಷಣ ತನ್ನ ಸ್ವಂತ ಆಟೋ ರಿಕ್ಷಾದಲ್ಲಿ ಹಾಕಿಕೊಂಡು ಸುಳ್ಯಕ್ಕೆ ಕರೆದುಕೊಂಡು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಿದರು. ನಂತರ ಕೆವಿಜಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿನ ಖರ್ಚು ವೆಚ್ಚವನ್ನು ತಾನೇ ಭರಿಸಿದರು.

ಅಗತ್ಯವಿರುವಷ್ಟು ಹಣ ಇಲ್ಲದಿದ್ದರೂ ತನ್ನ ಗೆಳೆಯರಿಂದ ತನ್ನ ಖಾತೆಗೆ ಹಣ ವರ್ಗಾವಣೆ ಮಾಡಿಸಿಕೊಂಡು ಆಸ್ಪತ್ರೆಯ ಶುಲ್ಕ ಭರಿಸಿ, ಜೀವ ಉಳಿಸುವ ಪುಣ್ಯಕಾರ್ಯ ಮಾಡಿದ್ದಾರೆ. ಮತ್ತು ಮಾನವೀಯತೆ ಮೆರೆದಿದ್ದಾರೆ.