ಏ. 7-8: ಬೆಳ್ಳಾರೆ ಒತ್ತೆಕೋಲ, ಇಂದು ಗೊನೆ ಮುಹೂರ್ತ

0

ಏ. 7-8ರಂದು ಬೆಳ್ಳಾರೆಯ ಅಜಪಿಲ ಶ್ರೀ ಮಹಾವಿಷ್ಣುಮೂರ್ತಿ ದೈವದ ಒತ್ತೆಕೋಲ ನಡೆಯಲಿದ್ದು, ಇಂದು ಗೊನೆ ಮುಹೂರ್ತ ನೆರವೇರಿತು.ಗೊನೆ ಮುಹೂರ್ತವನ್ನು ದೈವದ ಪ್ರಧಾನ ದರ್ಶನ ಪಾತ್ರಿ ಲೋಕೇಶ್ ಮಣಿಯಾಣಿ ಪಾಲ್ತಾಡು ನೆರವೇರಿಸಿಕೊಟ್ಟರು.

ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷರಾದ ಶೇಷಪ್ಪ ಕುಲಾಲ್ ಬಸ್ತಿಗುಡ್ಡೆ, ಗೌರವಾಧ್ಯಕ್ಷರಾದ ಆನಂದ ರೈ ಪುಡ್ಕಜೆ, ಕಾರ್ಯದರ್ಶಿ ಸಂಜಯ್ ನೆಟ್ಟಾರು, ಸಮಿತಿಯ ಪೂರ್ವಾಧ್ಯಕ್ಷರುಗಳಾದ ಆನಂದ ಗೌಡ ಪಡ್ಪು, ಕೊರಗಪ್ಪ ನಾಯ್ಕ್ ಕುರುಂಬುಡೇಲು, ಬೆಳ್ಳಾರೆ ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಶೇಖರ ಪನ್ನೆ, ಸ್ನೇಹಿತರ ಕಲಾ ಸಂಘದ ಅಧ್ಯಕ್ಷರಾದ ವಸಂತ ಉಲ್ಲಾಸ್, ಪೂರ್ವಧ್ಯಕ್ಷರಾದ ಚಂದ್ರಹಾಸ ಮಣಿಯಾಣಿ ಪಡ್ಪು, ಸದಸ್ಯರಾದ ಮಹಾಲಿಂಗ ಕುರುಂಬುಡೇಲು ಸೇರಿದಂತೆ ಊರ, ಪರವೂರ ಭಕ್ತಾದಿಗಳು ಉಪಸ್ಥಿತರಿದ್ದರು.