ಎ.5; ಎಣ್ಮೂರು ಶ್ರೀ ನಾಗಬ್ರಹ್ಮ ಕೋಟಿ ಚೆನ್ನಯ ಆದಿ ಬೈದಿರುಗಳ ನೇಮೋತ್ಸವ

0

ಎಣ್ಮೂರು ಶ್ರೀನಾಗಬ್ರಹ್ಮ ಕೋಟಿ ಚೆನ್ನಯ ಆದಿಬೈದೇರುಗಳ ನೇಮೋತ್ಸವವು ಎ.5 ರಂದು ವಿಜೃಂಭಣೆಯಿಂದ ನಡೆಯಲಿದೆ. ಏ.3ರಂದು ಬೆಳಿಗ್ಗೆ ಶ್ರೀ ಮಹಾ ಗಣಪತಿ ಹವನ, ರಾತ್ರಿ ಶ್ರೀ ಉಳ್ಳಾಕುಳ ನೇಮ ಮತ್ತು ಕಾಜು ಕುಜುಂಬ ನೇಮ, ಕೈಕಾಣಿಕೆ ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಲಿದೆ. ಎ.4ರಂದು ರಾತ್ರಿ ಇಷ್ಟದೇವತೆ ನೇಮೋತ್ಸವ,ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಲಿದೆ.

ಏ. 5ರಂದು ಬೆಳಿಗ್ಗೆ ನಾಗ ತಂಬಿಲ ,ಮುಹೂರ್ತ ತೋರಣ ,ಮಧ್ಯಾಹ್ನ ಕಟ್ಟಬೀಡಿನಿಂದ ಪೂರ್ವ ಸಂಪ್ರದಾಯದಂತೆ ಭಂಡಾರ ಹೊರಡುವುದು, ನೇತ್ರಾದಿ ಗರಡಿ ಯಲ್ಲಿ ದರ್ಶನ, ರಾತ್ರಿ ಗಂಟೆ 8ಕ್ಕೆ ಬೈದಿರುಗಳು ಗರಡಿ ಇಳಿಯುವುದು. ರಾತ್ರಿ ಗಂಟೆ 2:00ಕ್ಕೆ ಕಿನ್ನಿದಾರು ಗರಡಿ ಇಳಿದು ರಂಗಸ್ಥಳ ಪ್ರವೇಶ, ಪ್ರಾತಃಕಾಲ 3:30ಕ್ಕೆ ಎಣ್ಮೂರು ಕಟ್ಟಬೀಡಿಗೆ ಬೈದೇರುಗಳು ಹಾಲು ಕುಡಿಯಲು ಬಂದು ಬೀದಿಗೆ ಕಾಣಿಕೆ ಅರ್ಪಿಸುವುದು,ಬೆಳಿಗ್ಗೆ 5ಕ್ಕೆ ಕೋಟಿ ಚೆನ್ನಯರ ದರ್ಶನ ರಂಗಸ್ಥಳದಲ್ಲಿ(ಸೇಟು) ಬೈದೇರುಗಳ ಸೇಟು, ಬೆಳಿಗ್ಗೆ ಗಂಟೆ 7ಕ್ಕೆ ಬೈದೇರುಗಳಲ್ಲಿ ಅರಿಕೆ, ಗಂಧ ಪ್ರಸಾದ ಮತ್ತು ತುಲಾಭಾರ ನಡೆಯಲಿದೆ.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸಂಜೆ 6.30ಕ್ಕೆ ಕುಮಾರಿ ಮೇಘನಾ ಸಾಲಿಗ್ರಾಮ ಮತ್ತು ತಂಡ ದವರಿಂದ ಸ್ಯಾಕ್ಸೋಫೋನ್ ವಾದನ ನಡೆಯಲಿದೆ.

ಮಧ್ಯಾಹ್ನ ಮತ್ತು ರಾತ್ರಿ ಮಹಾ ಅನ್ನಸಂತರ್ಪಣೆ ನಡೆಯಲಿದ್ದು,ಈ ಎಲ್ಲ ಕಾರ್ಯಕ್ರಮದಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಅನುವಂಶಿಕ ಆಡಳಿತದಾರರಾದ ಕಟ್ಟಬೀಡು ರಾಮಕೃಷ್ಣ ಶೆಟ್ಟಿ ವಿನಂತಿಸಿದ್ದಾರೆ.