ಏ.4-5: ಪಲ್ಲೋಡಿ ವಾರ್ಷಿಕ ನೇಮ ನಡಾವಳಿ ಮತ್ತು ನಾಗತಂಬಿಲ, ಧಾರ್ಮಿಕ ಸಭೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ

0

ಶ್ರೀ ಉಳ್ಳಾಕುಲು ಚಾಮುಂಡಿ ಹಾಗೂ ಪರಿವಾರ ದೈವಗಳ ಕೂಡುಕಟ್ಟಿನ ದೈವಸ್ಥಾನ ಪಲ್ಲೋಡಿ -ಪಂಜ ಇದರ ವಾರ್ಷಿಕ ನೇಮ ನಡಾವಳಿ ಮತ್ತು ನಾಗತಂಬಿಲ ಏ.4ರಿಂದ ಏ.5ತನಕ ನಡೆಯಲಿದೆ.

ಏ.4ರಂದು ಬೆಳಿಗ್ಗೆ ಗಂ 9 ರಿಂದ ನಾಗತಂಬಿಲ, ಶ್ರೀ ದೈವಗಳಿಗೆ ಕಲಶ ಶುದ್ಧಿ, ಶ್ರೀ ಸತ್ಯನಾರಾಯಣ ದೇವರ ಪೂಜೆ , ಪ್ರಸಾದ ವಿತರಣೆ, ಅನ್ನಸಂತರ್ಪಣೆ ಜರುಗಲಿದೆ.
ಸಂಜೆ ಗಂ.5ರಿಂದ ಭಜನಾ ಕಾರ್ಯಕ್ರಮ.ರಾತ್ರಿ ಗಂಟೆ 6.00 ರಿಂದ ಕೂಡುಕಟ್ಟಿನ ಮಕ್ಕಳಿಂದ ವಿವಿಧ ಮನರಂಜನೆ ಕಾರ್ಯಕ್ರಮ, ರಾತ್ರಿ ಗಂಟೆ 7.30 ರಿಂದ ಸಭಾ ಕಾರ್ಯಕ್ರಮ,ರಾತ್ರಿ ಗಂಟೆ 9ಕ್ಕೆ ಶ್ರೀ ದೈವಗಳ ಭಂಡಾರ ತೆಗೆಯುವುದು. ಅನ್ನಸಂತರ್ಪಣೆ. ರಾತ್ರಿ ಗಂಟೆ 10.30 ರಿಂದ ಯಕ್ಷಗಾನ ನಡೆಯಲಿದೆ.


ಏ.5ರಂದು ಪ್ರಾತಃಕಾಲ ಗಂಟೆ 1ಕ್ಕೆ ಶ್ರೀ ಉಳ್ಳಾಕುಲು ದೈವದ ನೇಮ. ಬೆಳಿಗ್ಗೆ ಗಂಟೆ 3ಕ್ಕೆ ಶ್ರೀ ಅಣ್ಣಪ್ಪ ಪಂಜುರ್ಲಿ ಹಾಗೂ ಕಲ್ಲುರ್ಟಿ ದೈವದ ನೇಮ. ಬೆಳಿಗ್ಗೆ ಗಂಟೆ 5ಕ್ಕೆ ಶ್ರೀ ರುದ್ರಚಾಮುಂಡಿ ದೈವದ ನೇಮ,ಬೆಳಿಗ್ಗೆ ಗಂಟೆ 10.30ಕ್ಕೆ ಶ್ರೀ ಚಾಮುಂಡಿ ದೈವದ ನೇಮ, ಪ್ರಸಾದ ವಿತರಣೆ. ಮಧ್ಯಾಹ್ನ ಅನ್ನಸಂತರ್ಪಣೆ ಅಪರಾಹ್ನ ಗಂಟೆ 2ಕ್ಕೆ ಗುಳಿಗ ದೈವದ ನೇಮ ಜರುಗಲಿದೆ.

ಸಾಂಸ್ಕೃತಿಕ – ಧಾರ್ಮಿಕ ಸಭಾ ಕಾರ್ಯಕ್ರಮ


ಶ್ರೀ ಉಳ್ಳಾಕುಲು ಕಲಾರಂಗ ಪಲ್ಲೋಡಿ ಇವರ ವತಿಯಿಂದ ಶ್ರೀ ಉಳ್ಳಾಕುಲು ಚಾಮುಂಡಿ ಹಾಗೂ ಪರಿವಾರ ದೈವಗಳ ನೇಮೋತ್ಸವ ಪ್ರಯುಕ್ತ ಏ.4ರಂದು ಸಾಂಸ್ಕೃತಿಕ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ ಜರುಗಲಿದೆ.
ಸಂಜೆ ಗಂಟೆ 6.30 ರಿಂದ ಕೂಡುಕಟ್ಟಿನ ಮಕ್ಕಳಿಂದ ವಿವಿಧ ಮನೋರಂಜನೆ ಕಾರ್ಯಕ್ರಮ ಜರುಗಲಿದೆ.


ಸಂಜೆ ಗಂಟೆ 7.30ರಿಂದ ಜರುಗುವ ಸಭಾ ಕಾರ್ಯಕ್ರಮದಲ್ಲಿ ಪಲ್ಲೋಡಿ ಶ್ರೀ ಉಳ್ಳಾಕುಲು ಕಲಾರಂಗದ ಅಧ್ಯಕ್ಷ ಕವನ್ ಪಲ್ಲೋಡಿ ಸಭಾಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ
ಪಂಜ ಗ್ರಾ.ಪಂ.ಅಧ್ಯಕ್ಷೆ ಶ್ರೀಮತಿ ಪೂರ್ಣಿಮಾ ದೇರಾಜೆ , ಧಾರ್ಮಿಕ ಭಾಷಣ ಪ್ರಗತಿಪರ ಕೃಷಿಕ ಶಿವರಾಮಯ್ಯ ಕರ್ಮಾಜೆ ಮಾಡಲಿದ್ದಾರೆ. ಕಲಾರಂಗದ ಗೌರವಾಧ್ಯಕ್ಷ ನೇಮಿರಾಜ ಪಲ್ಲೋಡಿ, ಲಕ್ಷ್ಮೀಶ ಗಾಂಭೀರ ದೇವಸ್ಯ ತಳಮನೆ ಪಲ್ಲೋಡಿ, ಶ್ರೀ ಉಳ್ಳಾಕುಲು ಚಾಮುಂಡಿ ಹಾಗೂ ಪರಿವಾರ ದೈವಗಳ ದೈವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ದಾಮೋದರ ಗೌಡ ಪಲ್ಲೋಡಿ ಗೌರವ ಉಪಸ್ಥಿತರಿರುವರು.
ರಾತ್ರಿ ಗಂಟೆ 10 .30ರಿಂದ ಶ್ರೀ ಶಾರದಾಂಬ ಯಕ್ಷಗಾನ ಅಧ್ಯಯನ ಕಲಾ ಕ್ಷೇತ್ರ ಪಂಜ ಇದರ ವಿದ್ಯಾರ್ಥಿಗಳಿಂದ ಯಕ್ಷಮಣಿ ಗಿರೀಶ್ ಗಡಿಕಲ್ಲು ನಿರ್ದೇಶನದ ಯಕ್ಷಗಾನ ಬಯಲಾಟ ‘ಕದಂಬ ಕೌಶಿಕೆ’ (ಕನ್ನಡ ಪೌರಾಣಿಕ)ಪ್ರದರ್ಶನ ಗೊಳ್ಳಲಿದೆ.