ಸುಳ್ಯ ಹಳೇಗೆಟು ಸಂತೃಪ್ತಿ ಬಳಿ ಶ್ರೀ ಫೂಟ್ ವೇರ್ & ಫ್ಯಾನ್ಸಿ ಶುಭಾರಂಭ

0

ಸುಳ್ಯ ಹಳೇಗೆಟು ಸಂತೃಪ್ತಿ ರೆಸ್ಟೋರೆಂಟ್ ಬಳಿಯಲ್ಲಿ ಶ್ರೀಮತಿ ಕೀರ್ತನ ನವೀನ್ ಕುಮಾರ್ ಮಾಲಕತ್ವದ ಶ್ರೀ ಪೂಟ್ ವೇರ್ ಮತ್ತು ಪ್ಯಾನ್ಸಿ ಮಳಿಗೆ ಎ.2 ರಂದು ಶುಭಾರಂಭಗೊಂಡಿತುಮಳಿಗೆಯನ್ನು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಡಾ.ಗಿರೀಶ್ ಭಾರದ್ವಾಜ್ ಮತ್ತು ಪ್ರಗತಿಪರ ಕೃಷಿಕ ಕಜೆತ್ತಡ್ಕ ತಿಮ್ಮಪ್ಪ ಗೌಡ ಉದ್ಘಾಟಿಸಿದರು.

ಉದ್ಘಾಟನ ಸಮಾರಂಭದಲ್ಲಿ ನಗರ ಪಂಚಾಯತ್ ಮಾಜಿ ಅಧ್ಯಕ್ಷರುಗಳಾದ ಎನ್ ಎ ರಾಮಚಂದ್ರ, ಎಂ ವೆಂಕಪ್ಪ ಗೌಡ, ಎಂ ಬಿ ಫೌಂಡೇಶನ್ ಅಧ್ಯಕ್ಷ ಎಂ ಬಿ ಸದಾಶಿವ, ವರ್ತಕರ ಸಂಘದ ಅಧ್ಯಕ್ಷ ಪಿ ಬಿ ಸುಧಾಕರ ರೈ,ಪ್ರಧಾನ ಕಾರ್ಯದರ್ಶಿ ಡಿ ಎಸ್ ಗಿರೀಶ್,ಕೋಶಾಧಿಕಾರಿ ಹೇಮಂತ್ ಕಾಮತ್,ಸಾಮಾಜಿಕ ಕಾರ್ಯಕರ್ತೆ ಸುಮನ ಬೆಳ್ಳಾರ್ಕರ್, ಉದ್ಯಮಿ ದಾಮೋದರ ಗೌಡ ಜಬಳೆ, ರಹ್ಮಾನಿಯ ಕಾಂಪ್ಲೆಕ್ಸ್ ಮಾಲಕ ಮುಸ್ತಫಾ ಡೆಲ್ಮ, ಶ್ರಿಮತಿ ಚಂದ್ರಕಾಂತಿ ತಿಮ್ಮಪ್ಪ ಗೌಡ,ಜಿಲ್ಲಾ ಪಂಚಾಯತ್ ಉದ್ಯೋಗಿ ನೇಮಿಚಂದ್ರ,ಶ್ರೀಮತಿ ದಿವ್ಯ ನೇಮಿಚಂದ್ರ,ಜಯಪ್ರಸಾದ್ ಕಜೆತ್ತಡ್ಕ, ಕಿಶನ್ ಕಾವು,ಪವನ್ ಮಡ್ತಿಲ,ಅಜಿತ್ ಪೆರ್ಲ,ಪತ್ರಕರ್ತ ಶರೀಫ್ ಜಟ್ಟಿಪಳ್ಳ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ಸಂಸ್ಥೆ ಮಾಲಕಿ ಕೀರ್ತನ ಸರ್ವರನ್ನೂ ಸ್ವಾಗತಿಸಿ ಸಂತೃಪ್ತಿ ಮಾಲಕ ನವೀನ್ ಕುಮಾರ್‌ ಕಜೆತ್ತಡ್ಕ ಕಾರ್ಯಕ್ರಮ ನಿರೂಪಿಸಿದರುಮಳಿಗೆಯಲ್ಲಿ ಪುರುಷರ‌,ಮಹಿಳೆಯರ, ಮಕ್ಕಳ ಅತ್ಯಾಧುನಿಕ ಶೈಲಿಯ ವಿವಿಧ ವಿನ್ಯಾಸ ಚಪ್ಪಲಿಗಳು,ಶೂಗಳು ಹಾಗೂ ಫ್ಯಾನ್ಸಿ ಮೆಟೀರಿಯಲ್ ಗಳು ದೊರೆಯುತ್ತದೆ.

ಶುಭಾರಂಭ ಪ್ರಯುಕ್ತ ವಿಶೇಷ ರಿಯಾಯಿತಿ ದರದಲ್ಲಿ ನಿಮಗೆ ಬೇಕಾಗುವ ಪೂಟ್ ವೇರ್ ಮತ್ತು ಪ್ಯಾನ್ಸಿ ಸಾಮಾಗ್ರಿಗಳು ದೊರೆಯುತ್ತದೆ ಎಂದು‌ ಕೀರ್ತನ ನವೀನ್ ಕುಮಾರ್ ಸಂತೃಪ್ತಿ ತಿಳಿಸಿದ್ದಾರೆ.