ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಹಿರಿಯ ಸಹಾಯಕ ನಿರ್ದೇಶಕರಾಗಿ ಮುಂಭಡ್ತಿ ಪಡೆದ ಶ್ರೀಮತಿ ರಶ್ಮಿ ಅಭಿನಂದನೆ

0

ಸುಳ್ಯ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಶ್ರೀಮತಿ ರಶ್ಮಿ ಕೆ.ಎಂ.ರವರು ಮುಂಬಡ್ತಿ ಹೊಂದಿ ಮಂಗಳೂರಿನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಹಿರಿಯ ಸಹಾಯಕ ನಿರ್ದೇಶಕರಾಗಿ ನಿಯೋಜನೆಗೊಂಡಿರುತ್ತಾರೆ. ಈ ಹಿನ್ನೆಲೆಯಲ್ಲಿ ಸಿಡಿಪಿಒ ಕಛೇರಿ ವತಿಯಿಂದ ಶ್ರೀಮತಿ ರಶ್ಮಿ ಅಶೋಕ್ ನೆಕ್ರಾಜೆಯವರನ್ನು ಮಾ. 31ರಂದು ಅಭಿನಂದಿಸಲಾಯಿತು.

ಸುಳ್ಯ ಶಿಶು ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಶ್ರೀಮತಿ ಶೈಲಜಾ ಬಿ, ಮೇಲ್ವಿಚಾರಕರಾದ ಶ್ರೀಮತಿ ರವಿಶ್ರೀ ಕೆ, ಶ್ರೀಮತಿ ಪಿ. ದೀಪಿಕಾ, ಶ್ರೀಮತಿ ಉಷಾ ಪ್ರಸಾದ್ ರೈ, ಶ್ರೀಮತಿ ವಿಜಯ ಜೆ.ಡಿ, ಪ್ರಥಮ ದರ್ಜೆ ಸಹಾಯಕರಾದ ಕು. ಪೂಜಾ ಪಿ.ಎ, ನಿವೃತ್ತ ಚಾಲಕ ಯೋಗೀಶ್ ಗೌಡ ಎಂ, ಕಛೇರಿ ಸಿಬ್ಬಂದಿಗಳಾದ ಅಚ್ಚುತ ಎ, ಶ್ರೀಮತಿ ಮಲ್ಲಿಕಾ ಕೆ.ಯು, ಶ್ರೀಮತಿ ಬಿಂದಿಯಾ ಕೆ, ಶ್ರೀಮತಿ ಕಾವ್ಯ ಎನ್.ಆರ್, ಕು. ಪ್ರಮೀಳಾ ಎಂ.ಆರ್, ಕು. ಶೋಭಿತಾ ಕೆ.ಸಿ. ಮತ್ತು ಶ್ರೀಮತಿ ರೇಖಾ ಮಾಣಿಬೈಲುಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.