ಮೊರಂಗಲ್ಲು ಪರಿಶಿಷ್ಟ ಜಾತಿ ಕಾಲನಿಗೆ ಅವಶ್ಯ ಮೂಲಭೂತ ಸೌಲಭ್ಯ ನೀಡಿಲ್ಲ ಎಂಬ ಆರೋಪ

0

ಚುನಾವಣಾ ಬಹಿಷ್ಕಾರಕ್ಕೆ ನಿರ್ಧಾರ, ಬ್ಯಾನರ್ ಅಳವಡಿಕೆ

ಆಲೆಟ್ಟಿ ಪಂಚಾಯತ್ ವ್ಯಾಪ್ತಿಯ ಮೊರಂಗಲ್ಲು ಪರಿಶಿಷ್ಟ ಜಾತಿ ಕಾಲನಿಯ ನಿವಾಸಿಗಳು ಮೂಲಭೂತ ಸೌಕರ್ಯಗಳನ್ನು ಒದಗಿಸಿಲ್ಲ ಎಂಬ ಆರೋಪದಡಿಯಲ್ಲಿ ಈ ಬಾರಿಯ ವಿಧಾನ ಸಭಾ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ನಿರ್ಧರಿಸಿದ್ದು ಚುನಾವಣಾ ಬಹಿಷ್ಕಾರದ ಬ್ಯಾನರ್ ಅಳವಡಿಸಿರುವ ಘಟನೆ ಇಂದು ವರದಿಯಾಗಿದೆ.


ಮೊರಂಗಲ್ಲು ಭಾಗದಲ್ಲಿ ‌ಸುಮಾರು 35 ಕ್ಕಿಂತ ಹೆಚ್ಚು ಪರಿಶಿಷ್ಟ ಜಾತಿಗೆ ಸೇರಿದ ಮನೆಗಳಿದ್ದು ಇಲ್ಲಿ ಗೆ ಮೂಲಭೂತ ಸೌಕರ್ಯಗಳಾದ ರಸ್ತೆ ‌ಕಾಂಕ್ರಿಟಿಕರಣ ,ವಿದ್ಯುತ್ ಸಂಪರ್ಕ, ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಸ್ಮಶಾನ ದ ಅವಶ್ಯಕತೆ ಇದ್ದು ಕಳೆದ ಹಲವಾರು ವರ್ಷಗಳಿಂದ ಬೇಡಿಕೆ ಇರಿಸಲಾಗಿದೆ. ಈ ಭಾಗದ ಜನಪ್ರತಿನಿಧಿಗಳು‌, ರಾಜಕೀಯ ನಾಯಕರು ಬೇಡಿಕೆ ಈಡೇರಿಸದೆ ನಿರ್ಲಕ್ಷ್ಯ ಧೋರಣೆ ಅನುಸರಿಸಿರುವುದನ್ನು ಖಂಡಿಸಿ ಮುಂದಿನ ಚುನಾವಣೆಯಲ್ಲಿ ಮತದಾನ ಬಹಿಷ್ಕಾರ ಮಾಡುತ್ತೇವೆ ಮೊರಂಗಲ್ಲು ನಾಗರಿಕರು ಎಂಬ ಬರಹದ ಬ್ಯಾನರ್ ಅಳವಡಿಸಲಾಗಿದೆ.