ಅರಂತೋಡಿನಲ್ಲಿ ಪ್ರಕೃತಿ ಎಂಟರ್ ಪ್ರೈಸ್ ಶುಭಾರಂಭ

0

ಆರಂತೋಡಿನ ಗಿರಿಜಾ ಕಾಂಪ್ಲೆಕ್ಸ್ ನಲ್ಲಿ ಪ್ರವೀಣ್ ಬಂಗಾರ್ ಕೋಡಿಯವರ ಮಾಲಕತ್ವದ ಪ್ರಕೃತಿ ಎಂಟರ್ ಪ್ರೈಸ್ ಏ. 3 ರಂದು ಶುಭಾರಂಭಗೊಂಡಿತು.

ರಾಷ್ಟ್ರ ಪ್ರಶಸ್ತಿ ಪುರಸ್ಕೃತ ವಿಶ್ರಾಂತ ಪ್ರಾಂಶುಪಾಲ ಕೆ. ಆರ್. ಗಂಗಾಧರ್ ನೂತನ ಮಳಿಗೆ ಉದ್ಘಾಟಿಸಿ ಶುಭ ಹಾರೈಸಿದರು.

ಕಟ್ಟಡ ಮಾಲಕ ಜತ್ತಪ್ಪ ಮಾಸ್ಟರ್ ಅಳಿಕೆ, ಆರಂತೋಡು – ತೊಡಿಕಾನ ಪ್ರಾ.ಕೃ.ಪ.ಸ. ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ಉಪಾಧ್ಯಕ್ಷ ದಯಾನಂದ ಕುರುಂಜಿ, ಪ್ರಗತಿಪರ ಕೃಷಿಕ ನೂಜಾಲು ಪದ್ಮನಾಭ ಗೌಡ, ತೀರ್ಥರಾಮ ಪರ್ನೋಜಿ, ಶ್ರೀಮತಿ ಯಶೋಧ ಬಂಗಾರಕೋಡಿ,
ಕೃಷ್ಣಪ್ಪ ಗೌಡ ಪಾನತ್ತಿಲ, ಚಂದ್ರಪ್ರಕಾಶ್ ಪಾನತ್ತಿಲ, ಶ್ರೀಮತಿ ಶಶಿಕಲಾ ಚಂದ್ರಪ್ರಕಾಶ್, ನಿತ್ಯಾನಂದ ಚೆನ್ನಡ್ಕ, ಸ್ಥಳೀಯ ಅಂಗಡಿಗಳ ಸಹೋದ್ಯೋಗಿ ಮಿತ್ರರು ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

ಯಶ್ವಿತ್ ಕಾಳಮ್ಮನೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
ಕು.ನಿನಾದ ಅಪ್ಸರಾ ಪ್ರಾರ್ಥಿಸಿದರು. ಮಾಲಕ ಪ್ರವೀಣ್ ಬಂಗಾರಕೋಡಿ ವಂದಿಸಿದರು. ಶ್ರೀಮತಿ ಮಣಿ ಪವಿತ್ರ, ಮನೀಶ್ ಅಮೆಮನೆ ಸಹಕರಿಸಿದರು.