ಬೆಳ್ಳಾರೆ ಕುಸುಮಾಧರ ಆಚಾರ್ಯ ರವರಿಗೆ ಶ್ರದ್ಧಾಂಜಲಿ

0

ವಿಶ್ವ ಬ್ರಾಹ್ಮಣ ಸಮಾರಾಧನೆ

ಬೆಳ್ಳಾರೆ ಅಂಬಿಕ ಜ್ಯುವೆಲ್ಲರಿ ಮಾಲಕ ಕುಸುಮಾಧರ ಆಚಾರ್ಯರವರು ಮಾ.22 ರಂದು ನಿಧನರಾಗಿದ್ದು ಅವರಿಗೆ ಶ್ರದ್ಧಾಂಜಲಿ ಮತ್ತು ವಿಶ್ವ ಬ್ರಾಹ್ಮಣ ಸಮಾರಾಧನೆ ಎ.03 ರಂದು ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು.
ಬಾಲಚಂದ್ರ ಪುರೋಹಿತ್ ಬಜ್ಪೆ ಇವರು ದಿ.ಕುಸುಮಾಧರ ಆಚಾರ್ಯರವರ ಬಗ್ಗೆ ಗುಣಗಾನಗೈದು ನುಡಿನಮನ ಸಲ್ಲಿಸಿದರು.


ಆಗಮಿಸಿದ ನೂರಾರು ಜನ ಗಣ್ಯರು ದಿ.ಕುಸುಮಾಧರ ಆಚಾರ್ಯರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.
ಈ ಸಂದರ್ಭದಲ್ಲಿ ಪತ್ನಿ ಬೆಳ್ಳಾರೆ ಗ್ರಾಮ ಪಂಚಾಯತ್ ಗ್ರಂಥಾಲಯ ಮೇಲ್ವಿಚಾರಕಿ ಶ್ರೀಮತಿ ಶಶಿಕಲಾ ಪುತ್ರ ಧೀಶನ್ ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದರು.