ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ಸಂಸ್ಕೃತಿ ಶಿಬಿರ

0

ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ಬೇಸಿಗೆ ಸಂಸ್ಕೃತಿ ಶಿಬಿರದ ಉದ್ಘಾಟನಾ ಕಾರ್ಯಕ್ರಮ ಎ.1 ರಂದು‌ ನಡೆಯಿತು. ಕಾರ್ಯಕ್ರಮವನ್ನು ಸಂಸ್ಥೆಯ ಅಧ್ಯಕ್ಷರಾಗಿರುವ ಡಾ. ಚಂದ್ರಶೇಖರ ದಾಮ್ಲೆ ಯವರು ಉದ್ಘಾಟಿಸಿ ಮಾತನಾಡಿ ” ಜೀವನದುದ್ದಕ್ಕೂ ಕಲಿಯಲು ಬೇಕಾದಷ್ಟಿದೆ. ಕಲಿತದ್ದು ಕೊನೆಯವರೆಗೂ ಉಳಿಯುವಂತದಾಗಬೇಕು. ಪ್ರತಿಯೊಂದು ಮಗು ಸಂಪನ್ಮೂಲ ವ್ಯಕ್ತಿಯೇ. ನಿಮ್ಮೊಳಗೆ ನೀವು ಕಲಿಯುವಂತದ್ದು ಬೇಕಾದಷ್ಟಿದೆ.

ಪ್ರತಿಯೊಂದು ಕೆಲಸಕ್ಕೂ ಗೌರವ ನೀಡಿದಾಗ ನಮ್ಮಲ್ಲಿ ಕೀಳರಿಮೆ ಇರುವುದಿಲ್ಲ. ಎಲ್ಲರಲ್ಲೂ ಇರುವ ವಿಶೇಷ ಕೌಶಲ್ಯಗಳನ್ನು ಪ್ರದರ್ಶಿಸಿ ಆ ಮೂಲಕ ಅಸಾಧರಣ ಸಾಮರ್ಥ್ಯ ಹೊರಹೊಮ್ಮಲಿ. 8 ದಿನಗಳ ಶಿಬಿರ ಯಶಸ್ವಿಯಾಗಿ ನಡೆಯಲಿ ” ಎಂದು ಹೇಳಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಸಂಸ್ಥೆಯ ಮುಖ್ಯೋಪಾಧ್ಯಾಯನಿ ಶ್ರೀಮತಿ ಜಯಲಕ್ಷ್ಮಿ ದಾಮ್ಲೆ ಯವರು ಎ.1 ರಿಂದ ಎ.8ರವರೆಗೆ 8 ದಿನಗಳ ಕಾಲ ನಡೆಯುವ ಸಂಸ್ಕೃತಿ ಶಿಬಿರದ ಸ್ಥೂಲನೋಟ ತಮ್ಮ ಪ್ರಾಸ್ತಾವಿಕ ಮಾತುಗಳಲ್ಲಿ ತಿಳಿಸಿದರು. ಮತ್ತು ಎಲ್ಲರನ್ನು ಸ್ವಾಗತಿಸಿದರು.

ಕಾರ್ಯಕ್ರಮವನ್ನು ಶಿಕ್ಷಕಿ ಸವಿತಾ ಎಂ ನಿರ್ವಹಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಶಿಕ್ಷಕರು ಶಿಬಿರಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು.