ಬಾಳೆಗುಡ್ಡೆ ಕುಂಞಣ್ಣ ನಾಯ್ಕರ ಮನೆಯಲ್ಲಿ ಗೋಂದೋಳು ಪೂಜೆ – ಸನ್ಮಾನ

0

ಸುಳ್ಯ ಲ್ಯಾಂಪ್ಸ್ ಉಪಾಧ್ಯಕ್ಷ
ಬಾಳೆಗುಡ್ಡೆ ಕುಂಞಣ್ಣ ನಾಯ್ಕರ ಮನೆಯಲ್ಲಿ ಗೋಂದೋಳು ಪೂಜೆ ಮತ್ತು ಇಬ್ಬರು ದೇವಿಯ ದರ್ಶನ ಪಾತ್ರಿಗಳಿಗೆ ಸನ್ಮಾನ ಕಾರ್ಯಕ್ರಮ ಏ. 4 ರಂದು ನಡೆಯಿತು.
ಕುಂಞಣ್ಣ ನಾಯ್ಕ ಬಾಳೆಗುಡ್ಡೆಯವರ ಮನೆಯಲ್ಲಿ ನಡೆದ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿ. ಕುಂಞಣ್ಣ ನಾಯ್ಕ ಬಾಳೆಗುಡ್ಡೆ ವಹಿಸಿದ್ದರು. ಶ್ರೀ ದೇವಿಯ ದರ್ಶನ ಪಾತ್ರಿಗಳಾದ ಕೇನ್ಯ ಶಿವಪ್ಪ ನಾಯ್ಕ ಮತ್ತು ಚಂದ್ರಶೇಖರ ಕಮಿಲರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಬಿ. ನಾರಾಯಣ ನಾಯ್ಕ ಬೀಟಿಗೆ ಸ್ವಾಗತಿಸಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ ನ್ಯಾಯವಾದಿ, ಪುತ್ತೂರು ಮರಾಟಿ ಸಮಾಜ ಸೇವಾ ಸಂಘದ ಉಪಾಧ್ಯಕ್ಷ ಹಾಗೂ ಲ್ಯಾಂಪ್ಸ್ ಮಹಾಮಂಡಲ ಮೈಸೂರು ಇದರ ಉಪಾಧ್ಯಕ್ಷ ಮಂಜುನಾಥ ನಾಯ್ಕ ಸನ್ಮಾನಿತರಿಗೆ ಅಭಿನಂದನಾ ನುಡಿಗಳನ್ನಾಡಿದರು. ಕಳಂಜ ಬಾಳಿಲ ಪ್ರಾ.ಕೃ.ಪ.ಸ.ಸಂಘದ ನಿರ್ದೇಶಕ ಶುಭ ಕುಮಾರ್ ಬಾಳೆಗುಡ್ಡೆ ಸನ್ಮಾನ ಪತ್ರ ವಾಚಿಸಿದರು. ರಾಮಚಂದ್ರ ಕೆಂಬಾರೆ ವಂದಿಸಿದರು. ಸುದ್ದಿ ವರದಿಗಾರ ಈಶ್ವರ ವಾರಣಾಶಿ ಕಾರ್ಯಕ್ರಮ ನಿರೂಪಿಸಿದರು.