ಮರ್ಕಂಜ ಬಲ್ನಾಡು ಪೇಟೆ ಆಧೀಶ್ವರ ಸ್ವಾಮಿ ಬಸದಿಯಲ್ಲಿ ಭಗವಾನ್ ಶ್ರೀ ಮಹಾವೀರ ಜಯಂತಿ ಆಚರಣೆ

0

ಸುಳ್ಯ ತಾಲೂಕು ನಾಡಹಬ್ಬಗಳ ದಿನಾಚರಣಾ ಸಮಿತಿ ಇದರ ಆಶಯದಲ್ಲಿ ಭಗವಾನ್ ಶ್ರೀ ಮಹಾವೀರ ಜಯಂತಿ ಆಚರಣೆಯು ಮರ್ಕಂಜದ ಆಧೀಶ್ವರ ಸ್ವಾಮಿ ಬಲ್ನಾಡುಪೇಟೆ ಬಸದಿಯಲ್ಲಿ ಎ.4 ರಂದು ನಡೆಯಿತು.


ಬಲ್ನಾಡ್ ಪೇಟೆ ಆಧೀಶ್ವರ ಸ್ವಾಮಿ ಬಸದಿಯ ಅಧ್ಯಕ್ಷ ಬಿ. ನಾಗಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬಸದಿಯ ಆಡಳಿತ ಮೊಕ್ತೇಸರ ಬಿ. ಯುವರಾಜ್ ಶೆಟ್ಟಿ, ನಿವೃತ್ತ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಲಕ್ಷ್ಮೀಶ ರೈ, ತಾಲೂಕು ಜನಜಾಗೃತಿ ವೇದಿಕೆಯ ಅಧ್ಯಕ್ಷ ಲೋಕನಾಥ ಅಮೆಚೂರು, ಮರ್ಕಂಜ ಪಂಚಸ್ಥಾಪನೆಯ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ರಾಘವ ಗೌಡ, ಮರ್ಕಂಜ ಸಹಕಾರಿ ಸಂಘದ ಪೂರ್ವಾಧ್ಯಕ್ಷ ಕುಸುಮಾದರ ಗೌಡ ಪುರ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಭಗವಾನ್ ಶ್ರೀ ಮಹಾವೀರ ಜಯಂತಿಯ ಕುರಿತು ಧಾರ್ಮಿಕ ಉಪನ್ಯಾಸವನ್ನು
ಡಾ. ಪ್ರಭಾತ್ ಜೈನ್ ಬಲ್ನಾಡುಪೇಟೆ ನೀಡಿದರು. ಸಹನಾ ಪ್ರಭಾತ್ ಪ್ರಾರ್ಥಿಸಿದರು. ವಿದ್ಯಾಕುಮಾರ್ ಬಲ್ನಾಡುಪೇಟೆ ವಂದಿಸಿದರು.
ಬಸದಿಯ ಆಡಳಿತ ಸಮಿತಿಯ ಪ್ರಧಾನ ಕಾರ್ಯದರ್ಶಿ ಪದ್ಮನಾಭ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಬೆಳಗ್ಗೆ ಭಗವಾನ್ ಶ್ರೀ ಆದೀಶ್ವರ ಸ್ವಾಮಿಗೆ
ಕ್ಷೀರಾಭಿಷೇಕ ನಡೆದು ಭಗವಾನ್ ಮಹಾವೀರ ಸ್ವಾಮಿಯ ಜನ್ಮ ಕಲ್ಯಾಣ ಉತ್ಸವವಾಗಿ ಮಹಾಪೂಜೆಯಾಗಿ ಭಕ್ತಾದಿಗಳಿಗೆ ಪ್ರಸಾದ ವಿತರಣೆಯಾಯಿತು. ಆಗಮಿಸಿದ ಸರ್ವರಿಗೂ ಮಧ್ಯಾಹ್ನದ ಅನ್ನಸಂತರ್ಪಣೆ ವಿತರಣೆ ಯಾಯಿತು. ನಾಡ ಹಬ್ಬಗಳ ದಿನಾಚರಣಾ ಸಮಿತಿಯ ಇಲಾಖೆಯ ಅಧಿಕಾರಿಗಳು ಹಾಗೂ ಬಸದಿಯ ಸಮಿತಿಯ ಸದಸ್ಯರು ,ಸ್ಥಳೀಯ ಭಕ್ತಾದಿಗಳು ಭಾಗವಹಿಸಿದ್ದರು.