ಕೇರ್ಪಳ ರಸ್ತೆಯ ದುರ್ಗಾಪರಮೇಶ್ವರಿ ಕಲಾಮಂದಿರದ ಎದುರು ಅಪಾಯಕಾರಿ ಮರ

0

ಸುಳ್ಯದ ಕೇರ್ಪಳ ರಸ್ತೆಯಲ್ಲಿ ದುರ್ಗಾಪರಮೇಶ್ವರಿ ಕಲಾಮಂದಿರದ ಎದುರುಗಡೆ ಅಪಾಯಕಾರಿ ಮರವೊಂದಿದೆ. ಇದರ ಸಮೀಪವೇ ವಿದ್ಯುತ್ ಲೈನ್ ಗಳು ಕೂಡಾ ಹಾದು ಹೋಗುತ್ತಿದೆ. ಅಲ್ಲದೇ ಇದೇ ರಸ್ತೆಯಲ್ಲಿ ವಿದ್ಯಾರ್ಥಿಗಳು ಸೇರಿದಂತೆ ಸಾವಿರಾರು ಸಾರ್ವಜನಿಕರು ಹಾಗೂ ನೂರಾರು ವಾಹನಗಳು ದಿನಂಪ್ರತಿ ಸಂಚರಿಸುತ್ತವೆ.

ಮಳೆಗಾಲ ಹತ್ತಿರ ಬರುತ್ತಿದ್ದು, ಗಾಳಿ ಮಳೆಯ ಸಂದರ್ಭ ಮರ ಅಥವಾ ಮರದ ಕೊಂಬೆಗಳು ಮುರಿದು ಬೀಳುವ ಸಾಧ್ಯತೆಗಳು ಇರುವುದರಿಂದ ಈ ಅಪಾಯಕಾರಿ ಮರವನ್ನು ಸಂಬಂಧಪಟ್ಟವರು ಆದಷ್ಟು ಬೇಗ ತೆರವುಗೊಳಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ‌.