ರೆಂಜಿಲಾಡಿಯಲ್ಲಿ ಆನೆ ದಾಳಿಗೆ ಬಲಿಯಾದ ರಂಜಿತರ ಕುಟುಂಬಕ್ಕೆ ಧನ ಸಹಾಯ

0

ಬೆಳ್ತಂಗಡಿ ತಾಲೂಕು ಹಾಲು ಉತ್ಪಾದಕರ ಸಂಘಗಳಿಂದ ಮತ್ತು ನೌಕರರು ಸೇರಿ ಆನೆ ದಾಳಿಗೆ ತುತ್ತಾಗಿ ಮೃತರಾದ ಕಡಬ ತಾಲೂಕು ರೆಂಜಿಲಾಡಿ ಗ್ರಾಮದ ನೈಲ ರಂಜಿತ ರವರ ಕುಟುಂಬಕ್ಕೆ 65,000 ನಗದು ಪರಿಹಾರವನ್ನು ನೀಡಿದರು.

ಈ ಸಂದರ್ಭದಲ್ಲಿ ಹಾಲು ಒಕ್ಕೂಟದ ವಿಸ್ತರಣಾ ಧಿಕಾರಿಗಳಾದ ಆದಿತ್ಯ ಚಿದ್ಗಲ್ಲು, ಶ್ರೀಮತಿ ಸುಚಿತ್ರ, ಬೆಳ್ತಂಗಡಿ ತಾಲೂಕು, ನೌಕರರ ಸಂಘದ ಅಧ್ಯಕ್ಷರಾದ ಶರೀಫ್ ಕಾರ್ಯದರ್ಶಿಗಳಾದ ಮೇಬಲ್ ಮತ್ತು ಬೆಳ್ತಂಗಡಿ ತಾಲೂಕಿನ ಸಂಘಗಳ ಕಾರ್ಯದರ್ಶಿಗಳು ಉಪಸ್ಥಿತರಿದ್ದರು.