ತುಳು ಕರ್ನಾಟಕದ ಎರಡನೇ ಅಧಿಕೃತ ಭಾಷೆಯಾಗಲಿ ದೆಹಲಿ ಕರಾವಳಿ ಸಮಾವೇಶದಲ್ಲಿ ವಸಂತ ಶೆಟ್ಟಿ ಬೆಳ್ಳಾರೆ ಅಭಿಪ್ರಾಯ

0

ʼತುಳು ಬಂಧುಗಳು ಎಂದಿಗೂ ಕನ್ನಡದ ವಿರೋಧಿಗಳಾಗಿರಲೇ ಇಲ್ಲ. ತುಳುವರು ಕನ್ನಡದ ಅಭಿವೃದ್ಧಿಗೆ ವಿಶೇಷವಾಗಿ ದುಡಿದಿದ್ದಾರೆ, ಅದನ್ನು ಕನ್ನಡಿಗರೂ ಗುರುತಿಸಿದ್ದಾರೆ. ತುಳು ಭಾಷೆಗೆ ಸಂವಿಧಾನದ ಎಂಟನೇ ಪರಿಚ್ಚೇದದದಲ್ಲಿ ಸ್ಥಾನ ಸಿಗಬೇಕೆಂಬ ತುಳುವರ ಬೇಡಿಕೆಯನ್ನು ಕರ್ನಾಟಕ ಸರಕಾರವೇ ಶಿಫಾರಸ್ಸಿನೊಂದಿಗೆ ಕೇಂದ್ರ ಸರಕಾರಕ್ಕೆ ಕಳಿಸಿಕೊಟ್ಟಿದೆ. ದೆಹಲಿ ತುಳು ಸಿರಿಯೂ ಅದಕ್ಕಾಗಿ ಹೋರಾಟ ನಡೆಸುತ್ತಲೇ ಬಂದಿದೆ. ಆದರೆ ಇದೀಗ ಕರ್ನಾಟಕ ಸರಕಾರವು ಎರಡನೇ ಅಧಿಕೃತ ಭಾಷೆಯನ್ನಾಗಿ ತುಳುವನ್ನು ಅಂಗೀಕರಿಸಬಹುದೇ ಎಂಬುದನ್ನು ಪರಿಶೀಲಿಸಿ ವರದಿ ನೀಡಲು ಡಾ. ಮೋಹನ ಆಳ್ವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನೂ ನೇಮಕ ಮಾಡಿದೆ. ಈ ಸಮಿತಿಯ ಶಿಫಾರಸ್ಸನ್ನು ಕರ್ನಾಟಕ ಸರಕಾರ ಅಂಗೀಕರಿಸಿದರೆ ತುಳು ಎಂಟನೇ ಪರಿಚ್ಛೇದವನ್ನು ಸೇರಿ ಆ ಭಾಷೆ ಅಭಿವೃದ್ಧಿಯಾಗುತ್ತದೆ ಎಂದು ದೆಹಲಿ ತುಳುಸಿರಿಯ ಅಧ್ಯಕ್ಷ ವಸಂತ ಶೆಟ್ಟಿ ಬೆಳ್ಳಾರೆ ಹೇಳಿದರು.

ಅವರು ಏಪ್ರಿಲ್‌ 2ರಂದು ದೆಹಲಿ ತುಳು ಸಿರಿ ಆಯೋಜಿಸಿದ ಕರಾವಳಿ ಸಮಾವೇಶದ ಅಧ್ಯಕ್ಷತೆ ವಹಿಸಿ ಮಾತಾಡಿದರು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕಾಂತಾರ ಸಿನೇಮಾ ಖ್ಯಾತಿಯ ಶ್ರೀಮತಿ ಮಾನಸಿ ಸುಧೀರ್‌ ಆಶಯ ವ್ಯಕ್ತಪಡಿಸಿದರು. ಸಮಾರಂಭದಲ್ಲಿ ಅತಿಥಿಗಳಾಗಿ ಈಶ್ವರ ಮಡಿವಾಳ್‌ ಪ್ರೊ. ವಿಶ್ವನಾಥ, ಜೆ.ಎನ್.ಯು, ಡಾ. ಪುರುಷೋತ್ತಮ ಬಿಳಿಮಲೆಯವರು ಕಾರ್ಯಕ್ರಮದ ಆರಂಭದಲ್ಲಿ ತುಳುಸಿರಿಯ ಉಪಾಧ್ಯಕ್ಷೆ ಮಾಲಿನಿ ಪ್ರಹ್ಲಾದ್‌ ಸ್ವಾಗತಿಸಿ ಕಾರ್ಯದರ್ಶಿ ಉಡುಪಿ ಶ್ರೀಹರಿ ಭಟ್‌ ವಂದಿಸಿದರು. ಶ್ರೀಮತಿ ಪೂಜಾರಾವ್‌ ಕರಾವಳಿಯ ಎಲ್ಲಾ ಭಾಷೆಗಳಲ್ಲಿ ಕಾರ್ಯಕ್ರಮ ನಿರೂಪಣೆ ಮಾಡಿದರು.
ಸ್ಥಳೀಯ ಕರಾವಳಿ ಕಲಾವಿದರಿಂದ ಸಂಗೀತ ಹಾಗೂ ಕುದ್ರೋಳಿ ಗಣೇಶ್‌ ರವರ ಮ್ಯಾಜಿಕ್‌ ಪ್ರದರ್ಶನ ನಡೆಯಿತು.