ಶಶಿಧರ ಕಡಪಜಾಲು ರವರ ಶ್ರದ್ಧಾಂಜಲಿ ಕಾರ್ಯಕ್ರಮ

0

ಅಮರಮುಡ್ನೂರು ಗ್ರಾಮದ ಬೊಳ್ಕೋಡಿ ಶಶಿಧರ ಕಡಪಜಾಲು ರವರು ಮಾ.27 ರಂದು ನಿಧನರಾಗಿದ್ದು ಮೃತರ ಶ್ರದ್ಧಾಂಜಲಿ ಕಾರ್ಯಕ್ರಮ ಎ.6 ರಂದು ಮನೆಯಲ್ಲಿ ನಡೆಯಿತು.
ಹಿರಿಯರಾದ ಕಟ್ಟ ಸುಬ್ಬ ರಾವ್ ಪೈಲೂರು ರವರು ನುಡಿ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಮೃತರ ಪತ್ನಿ ಸುನೀತಾ, ಪುತ್ರಿಯರಾದ ಧನ್ಯಶ್ರೀ,ಸಮೀಕ್ಷಾ, ಶ್ರೀಹಸ್ತ ಮತ್ತು ಸಹೋದರರು ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದರು. ಆಗಮಿಸಿದ ಬಂಧು ಮಿತ್ರರು ಮೃತರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.