ವಿಧಾನಸಭಾ ಚುನಾವಣೆ ಹಿನ್ನೆಲೆ

0

ಬೆಳ್ಳಾರೆಯಲ್ಲಿ ಕೇಂದ್ರ ಪೊಲೀಸ್ ಪಡೆ ಮತ್ತು ಪೊಲೀಸರ ಪಥ ಸಂಚಲನ

ಕರ್ನಾಟಕ ರಾಜ್ಯ ವಿಧಾನ ಸಭಾ ಚುನಾವಣೆ ಹಿನ್ನೆಲೆಯಲ್ಲಿ ಬೆಳ್ಳಾರೆ ಪೇಟೆಯಲ್ಲಿ ದ.ಕ.ಎಸ್ಪಿ ವಿಕ್ರಂ ಆಮ್ಟೆಯವರ ನೇತೃತ್ವದಲ್ಲಿ ಪಥಸಂಚಲನ ನಡೆಯಿತು.


ಪುತ್ತೂರು ಡಿ.ವೈ.ಎಸ್ಪಿ.ವೀರಯ್ಯ ಹಿರೇಮಠ್, ಸುಳ್ಯ ಸರ್ಕಲ್ ಇನ್ಸ್ ಪೆಕ್ಟರ್ ರವೀಂದ್ರ, ಬೆಳ್ಳಾರೆ ಠಾಣೆಯ ಎಸ್.ಐ.ಸುಹಾಸ್,ಕ್ರೈಂ ಎಸ್.ಐ.ಶಿವಕುಮಾರ್, ಬೆಳ್ಳಾರೆ ಪೊಲೀಸರು, ಸಿ.ಆರ್.ಪಿ.ಎಫ್ ಮತ್ತು ಅಧಿಕಾರಿಗಳಿಂದ ಪಥ ಸಂಚಲನ ನಡೆಯಿತು.


ಬೆಳ್ಳಾರೆ ಪೊಲೀಸ್ ಠಾಣೆಯಿಂದ ಪಥಸಂಚಲನ ಪ್ರಾರಂಭವಾಗಿ ಬೆಳ್ಳಾರೆ ಕೆಳಗಿನ ಪೇಟೆ , ಮುಖ್ಯ ಪೇಟೆಯಲ್ಲಿ ಮತ್ತು ಬೆಳ್ಳಾರೆ ಮೇಲಿನ ಪೇಟೆ ಮಾಸ್ತಿಕಟ್ಟೆಯವರೆಗೆ ಪಥಸಂಚಲನ ನಡೆಯಿತು.