ಅಡ್ಕಾರು: ಚರಂಡಿ ಸ್ಲಾಬ್ ಮುಚ್ಚುವಂತೆ ಸ್ಥಳೀಯರ ಆಗ್ರಹ

0

ಜಾಲ್ಸೂರು ಗ್ರಾಮದ ಅಡ್ಕಾರಿನಲ್ಲಿ ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ಚರಂಡಿ ಸ್ಲಾಬನ್ನು ಇತ್ತೀಚೆಗೆ ತೆರೆದಿದ್ದು ಮುಚ್ಚದೇ ಇರುವುದರಿಂದ ರಸ್ತೆ ಬದಿ ಸಾರ್ವಜನಿಕರಿಗೆ ನಡೆದಾಡಲು ಕಷ್ಟಕರವಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಅಡ್ಕಾರಿನ ಕರಾವಳಿ ಹೋಟೆಲ್ ಪಕ್ಕದಲ್ಲಿ ಹೆದ್ದಾರಿ ಕಾಮಗಾರಿ ಸಂದರ್ಭದಲ್ಲಿ ಪಿ.ಡಬ್ಲ್ಯೂ. ಡಿ. ಇಲಾಖೆಯವರು ಹಾಕಿದ್ದ ಚರಂಡಿ ಸ್ಲಾಬನ್ನು ಇತ್ತೀಚೆಗೆ ತೆರೆದು, ಮಣ್ಣು ಹಾಗೂ ಹೂಳನ್ನು ತೆಗೆದಿದ್ದು, ಬಳಿಕ ಮುಚ್ಚದೇ ಹಾಗೇ ಬಿಟ್ಟಿದ್ದು, ಈ ಭಾಗದಲ್ಲಿ ಘನವಾಹನಗಳು ರಸ್ತೆಯಲ್ಲಿ ಸಂಚರಿಸುವ ಸಂದರ್ಭದಲ್ಲಿ ರಸ್ತೆ ಬದಿಯಲ್ಲಿ ಸಾರ್ವಜನಿಕರಿಗೆ ನಡೆದಾಡಲು ಕಷ್ಟಕರವಾದ ಪರಿಸ್ಥಿತಿ ಇದ್ದು, ಇದನ್ನು ಮುಚ್ಚುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.